ಗುರುವಾರ , ಜನವರಿ 28, 2021
15 °C

IND vs AUS: ಲಾಬುಷೇನ್ 91, ಸ್ಮಿತ್ ಫಿಫ್ಟಿ; ವಿರಾಮಕ್ಕೆ ಆಸೀಸ್ 249/5

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ: ಭಾರತ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸಾಗುತ್ತಿರುವ ತೃತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲೂ ಆಸ್ಟ್ರೇಲಿಯಾ ದಾಂಡಿಗರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. 

ಭೋಜನ ವಿರಾಮದ ಹೊತ್ತಿಗೆ ಆಸ್ಟ್ರೇಲಿಯಾ 84.5 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 249 ರನ್ ಪೇರಿಸಿದ್ದು, ಉತ್ತಮ ಮೊತ್ತದತ್ತ ಮುನ್ನಡೆದಿದೆ. ಈ ಮಧ್ಯೆ ಸುರಿದ ಮಳೆಯು ಪಂದ್ಯಕ್ಕೆ ಅಲ್ಪ ಅಡಚಣೆಯಾಗಿತ್ತು. 

166ಕ್ಕೆ 2 ಎಂಬ ಸ್ಕೋರ್‌ನಿಂದ ದಿನದಾಟ ಮುಂದುವರಿಸಿದ ಆಸೀಸ್‌ಗೆ ಮಾರ್ನಸ್ ಲಾಬುಷೇನ್ ಹಾಗೂ ಸ್ಟೀವನ್ ಸ್ಮಿತ್ ನೆರವಾದರು. ಇವರಿಬ್ಬರು ತೃತೀಯ ವಿಕೆಟ್‌ಗೆ ಶತಕದ ಜೊತೆಯಾಟ ನೀಡಿದರು. 

ಈ ನಡುವೆ ಶತಕದ ಅಂಚಿನಲ್ಲಿ ಲಾಬುಷೇನ್ ಎಡವಿ ಬಿದ್ದರು. 196 ಎಸೆತಗಳನ್ನು ಎದುರಿಸಿದ ಲಾಬುಷೇನ್ 11 ಬೌಂಡರಿಗಳ ನೆರವಿನಿಂದ 91 ರನ್ ಗಳಿಸಿದರು. ಈ ವಿಕೆಟ್ ರವೀಂದ್ರ ಜಡೇಜ ಪಾಲಾಯಿತು. 

ಇದನ್ನೂ ಓದಿ: 

ಬಳಿಕ ಕ್ರೀಸಿಗಿಳಿದ ಮ್ಯಾಥ್ಯೂ ವೇಡ್ (13) ಅವರನ್ನು ಔಟ್ ಮಾಡಿದ ಜಡೇಜ ಪರಿಣಾಮಕಾರಿ ಎನಿಸಿಕೊಂಡರು. ಇನ್ನೊಂದೆಡೆ ದಿಟ್ಟ ಹೋರಾಟ ಮುಂದುವರಿಸಿರುವ ಸ್ಟೀವನ್ ಸ್ಮಿತ್ ಭಾರತವನ್ನು ಕಾಡುತ್ತಿದ್ದಾರೆ. 

ಆಕರ್ಷಕ ಅರ್ಧಶತಕ ಗಳಿಸಿರುವ ಸ್ಟೀವನ್ ಸ್ಮಿತ್, ಶತಕದತ್ತ ಮುನ್ನುಗುತ್ತಿದ್ದಾರೆ. 159 ಎಸೆತಗಳನ್ನು ಎದುರಿಸಿರುವ ಅವರು 11 ಬೌಂಡರಿಗಳ ನೆರವಿನಿಂದ 76 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 

ಈ ಮಧ್ಯೆ ಭೋಜನ ವಿರಾಮಕ್ಕೆ ಕೆಲವೇ ಕ್ಷಣಗಳಿರುವಾಗ ಕ್ಯಾಮರಾನ್ ಗ್ರೀನ್ (0) ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದ ಜಸ್‌ಪ್ರೀತ್ ಬೂಮ್ರಾ, ಆಸೀಸ್‌ಗೆ ಮಗದೊಂದು ಆಘಾತ ನೀಡಿದರು. 

ಮಳೆ ಬಾಧಿತ ಮೊದಲ ದಿನದಾಟದಲ್ಲಿ ಪದಾರ್ಪಣಾ ಆಟಗಾರ ವಿಲ್ ಪುಕೊವಸ್ಕಿ (62) ಹಾಗೂ ಮಾರ್ನಸ್ ಲಾಬುಷೇನ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಎರಡು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು