IND vs ENG: ಇಂಗ್ಲೆಂಡ್ ತಿರುಗೇಟು; ಊಟದ ವಿರಾಮಕ್ಕೆ ಭಾರತ 80/4

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ದ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ ಭಾರತ ತಂಡದ ಬ್ಯಾಟ್ಸ್ಮನ್ಗಳು ವೈಫಲ್ಯವನ್ನು ಅನುಭವಿಸಿದ್ದಾರೆ.
ಇಂಗ್ಲೆಂಡ್ನ 205 ರನ್ಗಳಿಗೆ ಉತ್ತರವಾಗಿ ಭಾರತ ತಂಡವು ಎರಡನೇ ದಿನದಾಟದ ಊಟದ ವಿರಾಮದ ಹೊತ್ತಿಗೆ 37.5 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿದೆ.
It's Lunch on Day 2 of the 4⃣th @Paytm #INDvENG Test! @ImRo45 batting on 32*@ajinkyarahane88 gets out for 27 at the stroke of lunch#TeamIndia trail England by 125 runs.
Scorecard 👉 https://t.co/9KnAXjaKfb pic.twitter.com/jxR3y3jVe8
— BCCI (@BCCI) March 5, 2021
ಇನ್ನಿಂಗ್ಸ್ ಮುನ್ನಡೆಗಾಗಿ ಇನ್ನು ಆರು ವಿಕೆಟ್ ಬಾಕಿ ಉಳಿದಿರುವಂತೆಯೇ 125 ರನ್ ಗಳಿಸಬೇಕಾದ ಅಗತ್ಯವಿದೆ.
ಇದನ್ನೂ ಓದಿ: ಕೊಹ್ಲಿ-ಸ್ಟೋಕ್ಸ್ ಜಟಾಪಟಿ ಹಿಂದಿನ ಕಾರಣ ಬಹಿರಂಗಪಡಿಸಿದ ಸಿರಾಜ್
ಒಂದು ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿದ್ದ ಭಾರತ, ಎರಡನೇ ದಿನದಾಟದಲ್ಲೂ ಅತಿಯಾದ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿತ್ತು. ಈ ತಂತ್ರವು ಆತಿಥೇಯರಿಗೆ ಮುಳುವಾಗಿ ಪರಿಣಮಿಸಿತ್ತು.
A fantastic effort with the ball this morning! 👏
Scorecard: https://t.co/FxzqdLzDl5#INDvENG pic.twitter.com/7vX1fm8oYl
— England Cricket (@englandcricket) March 5, 2021
66 ಎಸೆತಗಳಲ್ಲಿ 17 ರನ್ ಗಳಿಸಿದ್ದ (1 ಬೌಂಡರಿ) ಚೇತೇಶ್ವರ್ ಪೂಜಾರ, ಸ್ಪಿನ್ನರ್ ಜ್ಯಾಕ್ ಲೀಚ್ ದಾಳಿಯಲ್ಲಿ ಔಟಾದರು. ಬಳಿಕ ಕ್ರೀಸಿಗಿಳಿದ ನಾಯಕ ವಿರಾಟ್ ಕೊಹ್ಲಿ (0) ಖಾತೆ ತೆರೆಯುವಲ್ಲಿ ವಿಫಲವಾದರು.
ಇದರೊಂದಿಗೆ ಸರಣಿಯಲ್ಲಿ ಎರಡನೇ ಬಾರಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಹೊರದಬ್ಬಿದ ಬೆನ್ ಸ್ಟೋಕ್ಸ್ ತಿರುಗೇಟು ನೀಡಿದರು. 41 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.
ಈ ನಡುವೆ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ ಆಸರೆಯಾದರು. ಇವರಿಗೆ ಉಪ ನಾಯಕ ಅಜಿಂಕ್ಯ ರಹಾನೆ ಸಾಥ್ ನೀಡಿದರು. ಇವರಿಬ್ಬರು ನಾಲ್ಕನೇ ವಿಕೆಟ್ಗೆ 39 ರನ್ಗಳ ಜೊತೆಯಾಟ ನೀಡಿದರು.
ಇದನ್ನೂ ಓದಿ: ಮೊಟೇರಾದಲ್ಲಿ ನಾಲ್ಕನೇ ಟೆಸ್ಟ್: ಸ್ಪಿನ್ ಭಯಕ್ಕೆ ಲಯ ತಪ್ಪಿದ ಇಂಗ್ಲೆಂಡ್
ಆದರೆ ಭೋಜನ ವಿರಾಮಕ್ಕೆ ಇನ್ನೇನು ಕ್ಷಣಗಳಿರುವಾಗ ರಹಾನೆ ಹೊರದಬ್ಬಿದ ಜೇಮ್ಸ್ ಆ್ಯಂಡರ್ಸನ್ ಮಗದೊಂದು ಆಘಾತ ನೀಡಿದರು. 45 ಎಸೆತಗಳನ್ನು ಎದುರಿಸಿದ ರಹಾನೆ ನಾಲ್ಕು ಬೌಂಡರಿಗಳಿಂದ 27 ರನ್ ಗಳಿಸಿದರು.
ಅತ್ತ 106 ಎಸೆತಗಳನ್ನು ಎದುರಿಸಿರುವ ರೋಹಿತ್ ಶರ್ಮಾ ನಾಲ್ಕು ಬೌಂಡರಿಗಳ ನೆರವಿನಿಂದ 32 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಇಂಗ್ಲೆಂಡ್ ತಂಡದ ಪರ ಆ್ಯಂಡರ್ಸನ್ ಎರಡು ಮತ್ತು ಬೆನ್ ಸ್ಟೋಕ್ಸ್ ಹಾಗೂ ಜ್ಯಾಕ್ ಲೀಚ್ ತಲಾ ಒಂದು ವಿಕೆಟ್ ಕಬಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.