ಬೆಕೆನ್ಹ್ಯಾಮ್: ಕರುಣ್ ನಾಯರ್ ಅವರಿಗೆ ಕ್ರಿಕೆಟ್ ‘ಎರಡನೇ ಅವಕಾಶ’ ನೀಡಿದೆ. ಆದರೆ ಈ ಅವಕಾಶವನ್ನು ಅವರು ಫಲಪ್ರದಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಮುಗಿದಿರುವ ಮೂರು ಪಂದ್ಯಗಳಲ್ಲಿಯೂ ಅವರಿಗೆ ಕಣಕ್ಕಿಳಿಯುವ ಅವಕಾಶ ಲಭಿಸಿತ್ತು. ಆದರೆ ನಿರೀಕ್ಷೆಯ ಮಟ್ಟಕ್ಕೆ ಅವರು ಆಟವಾಡಿಲ್ಲ. ಅದರಿಂದಾಗಿ ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವರಿಗೆ ಕಣಕ್ಕಿಳಿಯುವ 11ರ ಬಳಗದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ. ಈ ಸರಣಿಯಲ್ಲಿ ಅವರು ಆಡಿರುವ ಆರು ಇನಿಂಗ್ಸ್ಗಳಲ್ಲಿಯೂ ದೊಡ್ಡ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಕೆಲ ಇನಿಂಗ್ಸ್ಗಳಲ್ಲಿ ಉತ್ತಮ ಡ್ರೈವ್ಗಳನ್ನು ಪ್ರದರ್ಶಿಸಿದ್ದರು. ಆದರೂ ಲೆಂಗ್ತ್ ಎಸೆತಗಳನ್ನು ಆಡುವಲ್ಲಿ ತಡಬಡಾಯಿಸಿದ್ದರು.

ಲಾರ್ಡ್ಸ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಅವರು ಬ್ರೈಡನ್ ಕಾರ್ಸ್ ಹಾಕಿದ ಎಸೆತದ ಲೈನ್ ಮತ್ತು ಲೆಂಗ್ತ್ಗಳನ್ನು ಅಂದಾಜು ಮಾಡುವಲ್ಲಿ ಎಡವಿದರು. ಹೊಡೆತ ಆಡುವ ಪ್ರಯತ್ನ ಮಾಡುವ ಮುನ್ನವೇ ಅವರು ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಅವರಿಂದ ತಂಡವು ದೊಡ್ಡ ಇನಿಂಗ್ಸ್ ನಿರೀಕ್ಷೆ ಮಾಡುವುದು ಸಹಜ. ದೇಶಿ ಕ್ರಿಕೆಟ್ನಲ್ಲಿ ಅವರು ರನ್ಗಳ ರಾಶಿಯನ್ನು ಪೇರಿಸುವ ಮೂಲಕ ಭಾರತ ತಂಡದ ಆಯ್ಕೆಗಾರರ ಗಮನ ಸೆಳೆದಿದ್ದರು. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ತಮ್ಮ ಲಯಕ್ಕೆ ಮರಳಲು ಅವರಿಗೆ ಸಾಧ್ಯವಾಗಿಲ್ಲ.

ಕರುಣ್ ಅವರಿಗೆ ವಿಶ್ರಾಂತಿ ನೀಡಿದರೆ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಅವರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಸರಣಿಯ ಮೊದಲ ಪಂದ್ಯದಲ್ಲಿ ಅವರು ಪದಾರ್ಪಣೆ ಮಾಡಿದ್ದರು. ಆದರೆ ವೈಫಲ್ಯ ಅನುಭವಿಸಿದ್ದ ಅವರಿಗೆ ಉಳಿದ ಎರಡೂ ಪಂದ್ಯಗಳಲ್ಲಿ ವಿಶ್ರಾಂತಿ ನೀಡಲಾಗಿತ್ತು.

ಇದೇ 23ರಿಂದ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಕರುಣ್ ಬದಲು ಸಾಯಿ ಕಣಕ್ಕಿಳಿಯಬಹುದು. ಉಳಿದಂತೆ ತಂಡದಲ್ಲಿ ಯಾವುದೇ ಹೆಚ್ಚಿನ ಬದಲಾವಣೆಯ ಸಾಧ್ಯತೆ ಕಡಿಮೆ.

‘ಕರುಣ್ ತಮಗೆ ಸಿಗಬೇಕಿದ್ದ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವವರು ಗಟ್ಟಿಯಾದ ಇನಿಂಗ್ಸ್ ಕಟ್ಟಬೇಕು. ಆದರೆ ನಾಯರ್ ಅವರ ಇನಿಂಗ್ಸ್ನಲ್ಲಿ ಅಂತಹ ದೃಢತೆ ಕಂಡುಬರಲಿಲ್ಲ’ ಎಂದು ವೀಕ್ಷಕ ವಿವರಣೆಗಾರ ದೀಪ್ದಾಸ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.