ನವದೆಹಲಿ: ವೈಯಕ್ತಿಕ ಕಾರಣಗಳನ್ನು ನೀಡಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಅಂತಿಮ ಟೆಸ್ಟ್ಗಾಗಿ ಭಾರತ ತಂಡದಿಂದ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಹೊರ ನಡೆದಿದ್ದರು.

ಈಗ ಬೂಮ್ರಾ ಮದುವೆ ತಯಾರಿಯಲ್ಲಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಬಳಿ ಕೆಲವು ದಿನಗಳ ರಜೆಯನ್ನು ವಿನಂತಿಸಿದ್ದಾರೆ.

ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ಜಸ್ಪ್ರೀತ್ ಬೂಮ್ರಾ, ಮದುವೆ ತಯಾರಿಗಾಗಿ ರಜೆ ಹಾಕಿಕೊಂಡಿದ್ದಾರೆ. ಆದರೆ ವಧು ಯಾರೆಂಬ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿದೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ 27ರ ಹರೆಯದ ಬೂಮ್ರಾ, ಮೊದಲ ಹಾಗೂ ಮೂರನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ಸೇವೆಯನ್ನು ನೀಡಿದ್ದರು. ಎರಡನೇ ಟೆಸ್ಟ್ ಪಂದ್ಯದ ವೇಳೆ ವಿಶ್ರಾಂತಿಯನ್ನು ಸೂಚಿಸಲಾಗಿತ್ತು.

ಇದನ್ನೂ ಓದಿ: ಬೂಮ್ರಾ-ಅನುಪಮಾ ಪ್ರೇಮ್ ಕಹಾನಿ?

ಕೆಲಸದೊತ್ತಡವನ್ನು ನಿಭಾಯಿಸುವ ನಿಟ್ಟಿನಲ್ಲಿ ಮುಂಬರುವ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಯಿಂದಲೂ ಬೂಮ್ರಾಗೆ ವಿಶ್ರಾಂತಿ ಸೂಚಿಸಲಾಗಿದೆ.

ಅಂದ ಹಾಗೆ ಬೂಮ್ರಾ ವರಿಸಲಿರುವ ವಧು ಯಾರು ಹಾಗೂ ಮದುವೆ ಯಾವಾಗ ನಡೆಯಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.

ಈ ಹಿಂದೆ ಕೇರಳ ನಟಿ ಅನುಪಮಾ ಪರಮೇಶ್ವರನ್ ಜೊತೆ ಜಸ್ಪ್ರೀತ್ ಬೂಮ್ರಾ ಡೇಟಿಂಗ್ನಲ್ಲಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಹರಡಿದ್ದವು. ನಟಸಾರ್ವಭೌಮ ಚಿತ್ರದಲ್ಲೂ ಅನುಪಮಾ ಅಭಿನಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.