ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನನ್ನ ಅಪ್ಪನ ಕನಸು: ಸರ್ಫರಾಜ್ ಖಾನ್

Published 15 ಫೆಬ್ರುವರಿ 2024, 23:22 IST
Last Updated 15 ಫೆಬ್ರುವರಿ 2024, 23:22 IST
ಅಕ್ಷರ ಗಾತ್ರ

ರಾಜ್‌ಕೋಟ್: ಭಾರತ ತಂಡದಲ್ಲಿ ಆಡುವ ಸರ್ಫರಾಜ್ ಖಾನ್ ಅವರ ಬಹುದಿನಗಳ ಕನಸು ಗುರುವಾರ ನನಸಾಯಿತು. ಇದು ಸರ್ಫರಾಜ್ ಅವರ ಕನಸಷ್ಟೇ ಆಗಿರಲಿಲ್ಲ.

ಸರ್ಫರಾಜ್ ತಂದೆ ನೌಷಾದ್ ಖಾನ್ ಅವರು ಬಹಳ ವರ್ಷಗಳಿಂದ ಮಾಡಿದ ತಪಸ್ಸಿನ ಫಲವಿದು. ಸರ್ಫರಾಜ್ ಭಾರತ ತಂಡಕ್ಕೆ ಪ್ರವೇಶಿಸಿದ ಹಾದಿಯು ಸುಲಭದ ಹಾದಿಯಾಗಿರಲಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ರನ್‌ಗಳ ಹೊಳೆ ಹರಿಸಿದರೂ ಅವಕಾಶ ಸಿಗದೆ ಹತಾಶೆಗೊಂಡ ಮಗ ಕ್ರಿಕೆಟ್‌ನಿಂದ ವಿಮುಖವಾಗದಂತೆ ತಡೆದವರು ನೌಷಾದ್. ಅಷ್ಟೇ ಅಲ್ಲ ಸರ್ಫರಾಜ್ ಮತ್ತು ಅವರ ತಮ್ಮ ಮುಷೀರ್ ಖಾನ್ ಅವರನ್ನು ತಮ್ಮ ಕಣ್ರೆಪ್ಪೆಗಳಂತೆ ಜೋಪಾನ ಮಾಡಿ ಬೆಳೆಸಿದವರು.

ತಾವು ಕ್ರಿಕೆಟ್‌ನಲ್ಲಿ ಸಾಧನೆ ಮಾಡಲಾಗದ್ದನ್ನು ಮಕ್ಕಳಿಂದ ಮಾಡಿಸಿದವರು ನೌಷಾದ್.

ಗುರುವಾರ ಬೆಳಿಗ್ಗೆ ಅನಿಲ್ ಕುಂಬ್ಳೆ ಅವರು ಸರ್ಫರಾಜ್‌ಗೆ ಕ್ಯಾಪ್‌ (ಸಂಖ್ಯೆ 311) ಕೊಟ್ಟಾಗ ನೌಷಾದ್ ಮತ್ತು ಸರ್ಫರಾಜ್ ಪತ್ನಿ ರುಮಾನಾ ಜಹೂರ್ ಇದ್ದರು. ಇಬ್ಬರ ಕಂಗಳಲ್ಲಿಯೂ  ಆನಂದಭಾಷ್ಪ ಸುರಿಯಿತು. ಕ್ಯಾಪ್ ಪಡೆದ ನಂತರ ಸರ್ಫರಾಜ್  ಅವರಿಬ್ಬರನ್ನೂ ಅಪ್ಪಿಕೊಂಡು ಕಣ್ಣೀರಾದರು.

‘ನನ್ನ ತಂದೆ  ಭಾರತ ತಂಡಕ್ಕೆ ಆಡುವ ಕನಸು ಕಂಡವರು. ಆದರೆ ಅದು ಸಾಕಾರವಾಗಿರಲಿಲ್ಲ. ನಾನು ಇವತ್ತು ಆಡುತ್ತಿರುವುದು ಅವರಿಂದಾಗಿಯೇ’ ಎಂದು ಸುದ್ದಿಗಾರರ ಮುಂದೆ ಹೇಳಿದ ಸರ್ಫರಾಜ್ ಭಾವುಕರಾದರು.

‘ನನ್ನ ಕಠಿಣ ತರಬೇತಿ ಮತ್ತು ಧೋರಣೆಯು ಸರ್ಫರಾಜ್ ಮತ್ತು ಮುಷೀರ್ ಖಾನ್ ಇಬ್ಬರಿಗೂ ಬಹಳಷ್ಟು ಬಾರಿ ಕಷ್ಟವಾಗಿರಬಹುದು. ಆದರೆ ಶಿಸ್ತುಬದ್ಧ ಪಾಲನೆಯಿಂದ ಮತ್ತು ತರಬೇತಿಯಿಂದ ಇವತ್ತು ಕನಸು ಸಾಕಾರವಾಗಿದೆ’ ಎಂದು ನೌಷಾದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT