ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಇನಿಂಗ್ಸ್ | 5ನೇ ಸಲ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್‌ ಆದ ಕೊಹ್ಲಿ ಪಡೆ

ಕಿವೀಸ್ ಎದುರು 165ಕ್ಕೆ ಆಲೌಟ್: ಇದು ವಿರಾಟ್‌ ಬಳಗದ ಎರಡನೇ ಕನಿಷ್ಠ ಮೊತ್ತ
Last Updated 22 ಫೆಬ್ರುವರಿ 2020, 6:57 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್:ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ ಕೇವಲ 165 ರನ್‌ಗಳಿಗೆ ಆಲೌಟ್‌ ಆಗಿದೆ. ಆ ಮೂಲಕ ವಿರಾಟ್‌ ಕೊಹ್ಲಿ ನೇತೃತ್ವದ ತಂಡ ಒಟ್ಟಾರೆ ಐದನೇ ಬಾರಿಗೆ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್‌ ಆದಂತಾಗಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ತಂಡ ಮೊದಲ ದಿನದಾಟದಂತ್ಯಕ್ಕೆ55 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 122 ರನ್‌ ಗಳಿಸಿತ್ತು. ಎರಡನೇ ದಿನ ಆ ಮೊತ್ತಕ್ಕೆ ಕೇವಲ 43 ರನ್‌ ಸೇರಿಸಲಷ್ಟೇ ವಿರಾಟ್‌ ಕೊಹ್ಲಿ ಪಡೆ ಶಕ್ತವಾಯಿತು.

ಇದು ಕೊಹ್ಲಿ ನಾಯಕತ್ವದಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿಗಳಿಸಿದ ಎರಡನೇ ಕನಿಷ್ಠ ಮೊತ್ತವೂ ಹೌದು.

2018ರಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದ ಭಾರತ, ಆತಿಥೇಯ ತಂಡದ ವಿರುದ್ಧ ಐದು ಟೆಸ್ಟ್‌ ಹಾಗೂ ತಲಾ ಮೂರು ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಿತ್ತು. ಈ ವೇಳೆ ಆಗಸ್ಟ್‌ 9ರಿಂದ 13ರ ವರೆಗೆ ನಡೆದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡ ಕೇವಲ 107 ರನ್‌ ಗಳಿಗೆ ಆಲೌಟ್‌ ಆಗಿತ್ತು.

200ಕ್ಕಿಂತ ಕಡಿಮೆ ಮೊತ್ತಕ್ಕೆಐದನೇ ಸಲ ಆಲೌಟ್‌
ಒಟ್ಟಾರೆಯಾಗಿ ಕೊಹ್ಲಿ ಪಡೆ 200ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್‌ ಆದದ್ದು ಇದು ಐದನೇ ಸಲ. ಈ ಹಿಂದೆ 2017ರ ನವೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧಕೋಲ್ಕತ್ತದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 172ಕ್ಕೆ ಆಲೌಟ್‌ ಆಗಿತ್ತು.

2018ರ ಜನವರಿಯಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಪಡೆ 187ಕ್ಕೆ ಆಲೌಟ್‌ ಆಗಿತ್ತು.2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 189ಕ್ಕೆ ಆಲೌಟ್‌ ಆಗಿರುವುದು ಐದನೇ ಕನಿಷ್ಠ ಮೊತ್ತವಾಗಿದೆ.

ಇವುಗಳಲ್ಲಿಇಂಗ್ಲೆಂಡ್‌ ವಿರುದ್ಧ ಸೋಲು ಕಂಡಿದ್ದ ಭಾರತ,ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಶ್ರೀಲಂಕಾ ವಿರುದ್ಧ ಡ್ರಾನಲ್ಲಿ ಮುಕ್ತಾಯವಾಗಿತ್ತು.

ಕಿವೀಸ್‌ಗೆ ಇನಿಂಗ್ಸ್‌ ಮುನ್ನಡೆ
ಕನಿಷ್ಠ ಮೊತ್ತದೆದರು ಇನಿಂಗ್ಸ್‌ ಆರಂಭಿಸಿರುವ ಆತಿಥೇಯ ನ್ಯೂಜಿಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 51 ರನ್‌ಗಳ ಮುನ್ನಡೆ ಸಾಧಿಸಿದೆ.ನಾಯಕ ಕೇನ್‌ ವಿಲಿಯಮ್ಸ್‌ನ್‌ ಅರ್ಧಶತಕ (89) ಗಳಿಸಿ ನೆರವಾದರು.

ಸದ್ಯ ಎರಡನೇ ದಿನದಾಟ ಮುಕ್ತಾಯವಾಗಿದ್ದು ವಿಲಿಯಮ್ಸನ್‌ ಬಳಗ 71.1 ಓವರ್‌ಗಳಲ್ಲಿ ಐದುವಿಕೆಟ್‌ ಕಳೆದುಕೊಂಡು 216 ರನ್‌ ಗಳಿಸಿದೆ. 14 ರನ್‌ ಗಳಿಸಿರುವ ಹೆನ್ರಿ ನಿಕೋಲಸ್‌ ಮತ್ತು 4 ರನ್ ಹೊಡೆದಿರುವ ಕಾಲಿನ್‌ ಡಿ ಗ್ರಾಂಡ್‌ ಹೋಮ್‌ ಕ್ರೀಸ್‌ನಲ್ಲಿದ್ದಾರೆ.

ಭಾರತ ಪರ ಇಶಾಂತ್ ಶರ್ಮಾ 3 ವಿಕೆಟ್ ಪಡೆದರೆ, ಮೊಹಮದ್‌ ಶಮಿ ಮತ್ತು ರವಿಚಂದ್ರನ್‌ ಅಶ್ವಿನ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT