ಗುರುವಾರ , ಏಪ್ರಿಲ್ 2, 2020
19 °C

IND vs NZ | ಟೆಸ್ಟ್ ತಂಡಕ್ಕೆ ಬೌಲ್ಟ್‌ ವಾಪಸ್; ಸ್ಯಾಂಟ್ನರ್ ಕೈ ಬಿಟ್ಟ ಕಿವೀಸ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ನ್ಯೂಜಿಲೆಂಡ್‌ 13 ಆಟಗಾರರ ತಂಡ ಪ್ರಕಟಿಸಿದ್ದು, ಗಾಯಗೊಂಡು ವಿಶ್ರಾಂತಿಯಲ್ಲಿದ್ದ ವೇಗಿ ಟ್ರೆಂಟ್‌ ಬೌಲ್ಟ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸದ್ಯ ಮುಕ್ತಾಯವಾಗಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕ್ಲೀನ್‌ ಸ್ವೀಪ್‌ ಸಾಧಿಸಿತ್ತು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್‌, ವಿರಾಟ್‌ ಕೊಹ್ಲಿಯನ್ನು ವೈಟ್‌ ವಾಷ್‌ ಮಾಡಿತ್ತು. ಹೀಗಾಗಿ ಟೆಸ್ಟ್ ಸರಣಿಯು ಕುತೂಹಲ ಕೆರಳಿಸಿದೆ. ಇದೇ ತಿಂಗಳು 21ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಆಡಿದ್ದ ಮೂರು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಿವೀಸ್‌ ಮುಖಭಂಗ ಅನುಭವಿಸಿತ್ತು. ಆ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಜೀತ್ ರಾವಲ್‌, ಆಲ್ರೌಂಡರ್‌ ಮಿಚೇಲ್‌ ಸ್ಯಾಂಟ್ನರ್ ಮತ್ತು ವೇಗಿ ಮ್ಯಾಟ್‌ ಹೆನ್ರಿ ಅವರನ್ನು ಕೈಬಿಡಲಾಗಿದ್ದು, ಎಡಗೈ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಮತ್ತು ವೇಗಿ ಕೈಲ್‌ ಜೆಮಿಸನ್‌ಗೆ ಅವಕಾಶ ನೀಡಲಾಗಿದೆ.

ನ್ಯೂಜಿಲೆಂಡ್‌ ತಂಡ ಹೀಗಿದೆ
ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲಾಥಮ್‌, ಡರೆಲ್‌ ಮಿಚೆಲ್‌, ಹೆನ್ರಿ ನಿಕೋಲಸ್‌, ಟಿಮ್‌ ಸೌಥಿ, ಟಾಮ್‌ ಬ್ಲಂಡೆಲ್‌, ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಡಿ ಗ್ರಾಂಡ್‌ ಹೋಮ್‌, ಬಿಜೆ ವಾಟ್ಲಿಂಗ್‌, ನೀಲ್‌ ವ್ಯಾಗ್ನರ್‌, ಕೈಲ್‌ ಜೆಮಿಸನ್‌, ಅಜಾಜ್‌ ಪಟೇಲ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು