ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IND vs SA 2nd Test: ಮರ್ಕರಂ ಶತಕ; ಭಾರತಕ್ಕೆ 79 ರನ್‌ ಗೆಲುವಿನ ಗುರಿ

Published 4 ಜನವರಿ 2024, 10:15 IST
Last Updated 4 ಜನವರಿ 2024, 10:15 IST
ಅಕ್ಷರ ಗಾತ್ರ

ಕೇಪ್‌ಟೌನ್: ನ್ಯೂಲ್ಯಾಂಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಸರಣಿಯ ಎರಡನೇ ಟೆಸ್ಟ್‌ ಪಂದ್ಯದ 2ನೇ ದಿನವಾದ ಗುರುವಾರ ಮತ್ತೆ ವೇಗದ ಬೌಲರ್‌ಗಳೇ ಪಾರುಪತ್ಯ ಮೆರೆದಿದ್ದಾರೆ. 

ಇಂದು ಸಹ ಆಫ್ರಿಕಾದ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರೆ ಏಡನ್ ಮರ್ಕರಂ ಅವರ ಏಕಾಂಗಿ ಹೋರಾಟ ನಡೆಸಿ 106 ರನ್‌ಗಳಿಸಿ ಗಮನ ಸೆಳೆದರು. ಆಫ್ರಿಕಾ ತಂಡ ಭಾರತಕ್ಕೆ 79 ರನ್‌ಗಳ ಗೆಲುವಿನ ಗುರಿ ನೀಡಿದೆ. 

ಸರಣಿಯ ಮೊದಲ ಪಂದ್ಯದಲ್ಲಿ ಇನಿಂಗ್ಸ್‌ ಮತ್ತು 32 ರನ್‌ಗಳಿಂದ ಗೆದ್ದಿದ್ದ ಆತಿಥೇಯ ತಂಡವು ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. 

ಭಾರತದ ವೇಗಿ ಮೊಹಮ್ಮದ್ ಸಿರಾಜ್ (15ಕ್ಕೆ6) ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ 23.2 ಓವರ್‌ಗಳಲ್ಲಿ 55 ರನ್ ಗಳಿಸಿ ಆಲೌಟ್ ಅಯಿತು. 121 ನಿಮಿಷದಲ್ಲಿ ಆತಿಥೇಯರ ಮೊದಲ ಇನಿಂಗ್ಸ್‌ ಮುಕ್ತಾಯವಾಯಿತು.

ಊಟದ ವಿರಾಮದ ನಂತರ ಇನಿಂಗ್ಸ್ ಆರಂಭಿಸಿದ ಭಾರತ ತಂಡ 34.5 ಓವರ್‌ಗಳಲ್ಲಿ 153 ರನ್‌ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ 98 ರನ್‌ಗಳ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ದಿನದಾಟದ ಮುಕ್ತಾಯಕ್ಕೆ 17 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 62 ರನ್‌ ಗಳಿಸಿತ್ತು. ಈ ಇನಿಂಗ್ಸ್‌ನಲ್ಲಿ ಮುಕೇಶ್ ಕುಮಾರ್ (25ಕ್ಕೆ2) ಆತಿಥೇಯರಿಗೆ ಆರಂಭಿಕ ಪೆಟ್ಟುಕೊಟ್ಟರು. 

ಎರಡನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ 36.5 ಓವರ್‌ಗಳಲ್ಲಿ 176 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು.

ಸ್ಕೋರ್‌...

ದಕ್ಷಿಣ ಆಫ್ರಿಕಾ

ಮೊದಲ ಇನಿಂಗ್ಸ್‌: 55-10 (23.2 Ov)

ಎರಡನೇ ಇನಿಂಗ್ಸ್‌: 176-10 (36.5 Ov)

ಭಾರತ 

ಮೊದಲ ಇನಿಂಗ್ಸ್‌: 153-10 (34.5 Ov)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT