ಬೆಂಗಳೂರು: ಒಂದೇ ದಿನದಲ್ಲಿ ಹದಿನಾಲ್ಕು ವಿಕೆಟ್ಗಳು ಪತನವಾದ ಅಂಗಣದಲ್ಲಿ ರಿಷಭ್ ಪಂತ್ ಭಾರತ ಎ ತಂಡದ ಗೆಲುವಿನ ನಿರೀಕ್ಷೆಯಾಗಿ ನಿಂತಿದ್ದಾರೆ.

ದಕ್ಷಿಣ ಆಫ್ರಿಕಾ ಎ ತಂಡದ ಎದುರಿನ ‘ಟೆಸ್ಟ್’ (ಚತುರ್ಥ ದಿನ) ಪಂದ್ಯದ ಮೂರನೇ ದಿನದಾಟದಲ್ಲಿ 275 ರನ್ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿರುವ ಭಾರತ ಎ ತಂಡವು 119 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ನಾಯಕ ಪಂತ್ (ಬ್ಯಾಟಿಂಗ್ 64) ಮತ್ತು ಇನ್ನೂ ಖಾತೆ ತೆರೆಯದ ಆಯುಷ್ ಬದೋನಿ ಕ್ರೀಸ್ನಲ್ಲಿದ್ದಾರೆ.

ಪಂದ್ಯದ ಕೊನೆಯ ದಿನವಾದ ಭಾನುವಾರ ಗೆಲುವಿಗಾಗಿ ಆತಿಥೇಯರಿಗೆ ಇನ್ನೂ 156 ರನ್ಗಳು ಬೇಕು. ಅದೇ ಪ್ರವಾಸಿ ಬಳಗವು ಏಳು ವಿಕೆಟ್ ಕಬಳಿಸಬೇಕು. ಬೆಳಗಿನ ಅವಧಿಯಲ್ಲಿ ರಿಷಭ್ ಮತ್ತು ಆಯುಷ್ ಅವರು ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ಜೋರಾಗಿ ಬೀಸುವ ಗಾಳಿ ಮತ್ತು ದಕ್ಷಿಣ ಆಫ್ರಿಕಾದ ವೇಗಿಗಳ ಬಿರುಗಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರೆ ಜಯಿಸುವ ಸಾಧ್ಯತೆ ಹೆಚ್ಚಿದೆ. ಉಭಯ ತಂಡಗಳೂ ಜಯಕ್ಕಾಗಿ ಜಿದ್ದಾಜಿದ್ದಿಗೆ ಬಿದ್ದಿರುವುದರಿಂದ ಕೊನೆಯ ದಿನದಾಟವು ರೋಚಕವಾಗುವ ನಿರೀಕ್ಷೆ ಇದೆ.

ಮೂರನೇ ದಿನದಾಟದಲ್ಲಿ ಆತಿಥೇಯ ಬೌಲಿಂಗ್ ಪಡೆ ಮೇಲುಗೈ ಸಾಧಿಸಿತು. ಶುಕ್ರವಾರ ಮೊದಲ ಇನಿಂಗ್ಸ್ನಲ್ಲಿ 75 ರನ್ಗಳ ಮುನ್ನಡೆ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಎರಡನೇ ಇನಿಂಗ್ಸ್ನಲ್ಲಿ 199 (48.1 ಓವರ್) ರನ್ಗಳಿಗೆ ಕಟ್ಟಿಹಾಕುವಲ್ಲಿ ಸ್ಪಿನ್ನರ್ ತನುಷ್ ಕೋಟ್ಯಾನ್ (26ಕ್ಕೆ4) ಮತ್ತು ಅನ್ಷುಲ್ ಕಂಬೋಜ್ (39ಕ್ಕೆ3) ಯಶಸ್ವಿಯಾದರು. ಒಟ್ಟು 242 ನಿಮಿಷಗಳ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ಆಲೌಟ್ ಆಯಿತು.

ಗುರಿ ಬೆನ್ನಟ್ಟಿದ ಆತಿಥೇಯರಿಗೆ ವೇಗದ ಜೋಡಿ ಟಿಶೆಪೊ ಮೊರೇಕಿ (12ಕ್ಕೆ2) ಮ್ತು ಒಕುಲೆ ಸಿಲಿ (40ಕ್ಕೆ1) ಆರಂಭದಲ್ಲಿಯೇ ಪೆಟ್ಟು ಕೊಟ್ಟರು. ಇದರಿಂದಾಗಿ ತಂಡವು 32 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತು.

ಆದರೆ ರಿಷಭ್ ಕ್ರೀಸ್ಗೆ ಬರುತ್ತಲೇ ತಮ್ಮ ಆಕ್ರಮಣಶೈಲಿಯಲ್ಲಿಯೇ ಆಡಿದರು. ಈ ಬಾರಿ ಅವರಿಗೆ ಅದೃಷ್ಟ ಜೊತೆ ನೀಡಿತು. ಇನ್ನೊಂದು ಬದಿಯಲ್ಲಿದ್ದ ರಜತ್ ಪಾಟೀದಾರ್ ಕೂಡ ತಮ್ಮ ಆಟದ ವೇಗಕ್ಕೆ ಕಡಿವಾಣ ಹಾಕಿ ಪಂತ್ಗೆ ವೇದಿಕೆ ಬಿಟ್ಟುಕೊಟ್ಟರು. ಅಲ್ಲದೇ ಪಂತ್ ಸದ್ಯದ ಪರಿಸ್ಥಿತಿಯಲ್ಲಿ ತಮ್ಮ ಆಟದ ಮಹತ್ವ ಅರಿತು ಬ್ಯಾಟ್ ಬೀಸಿದರು.

ಚಹಾ ನಂತರದ ಅವಧಿಯಲ್ಲಿ ಇಬ್ಬರ ಜೊತೆಯಾಟ ರಂಗೇರಿತು. ಪಂತ್ 2 ಸಿಕ್ಸರ್ ಮತ್ತು 8 ಬೌಂಡರಿಗಳನ್ನು ಸಿಡಿಸಿದರು. ತಾವೆದುರಿಸಿದ 65ನೇ ಎಸೆತವನ್ನು ಬೌಂಡರಿಗೆ ಕಳಿಸಿ ಅರ್ಧಶತಕದ ಗಡಿ ದಾಟಿದರು. ಅದಕ್ಕೂ ಸ್ವಲ್ಪ ಹೊತ್ತಿಗೂ ಮುನ್ನ ಪಂತ್ ಅವರ ಸುಲಭ ಕ್ಯಾಚ್ ನೆಲಕ್ಕೆ ಚೆಲ್ಲಿದ್ದ ಒಕುಲೆ ಕೈಕೈ ಹಿಸುಕಿಕೊಂಡರು. ರಜತ್ ಅವರಿಗೂ ಸ್ಲಿಪ್ ಫೀಲ್ಡರ್ ಹರ್ಮನ್ ಜೀವದಾನ ನೀಡಿದ್ದು ತುಟ್ಟಿಯಾಯಿತು. ಇವರಿಬ್ಬರ ಜೊತೆಯಾಟದಲ್ಲಿ 87 ರನ್ ಸೇರಿದವು. ದಿನದಾಟ ಮುಗಿಯಲು ಇನ್ನೂ ಎರಡು ಓವರ್ಗಳು ಬಾಕಿ ಇರುವಾಗ ರಜತ್ ವಿಕೆಟ್ ಪಡೆಯುವಲ್ಲಿ ವ್ಯಾನ್ ವಿವುರ್ನ್ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ ಎ: 309 ಭಾರತ ಎ: 234. ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ ಎ: 48.1 ಓವರ್ಗಳಲ್ಲಿ 199 (ಲೆಸೆಗೊ ಸೆನೊಕ್ವಾನೆ 37 ಜುಬೇರ್ ಹಮ್ಜಾ 37 ಟಿಶೆಪೊ ಮೊರೆಕಿ 25 ಗುರ್ನೂರ್ ಬ್ರಾರ್ 40ಕ್ಕೆ2 ಅನ್ಷುಲ್ ಕಂಬೋಜ್ 39ಕ್ಕೆ3 ತನುಷ್ ಕೋಟ್ಯಾನ್ 26ಕ್ಕೆ4) ಭಾರತ ಎ: 39 ಓವರ್ಗಳಲ್ಲಿ 4ಕ್ಕೆ119 (ಸಾಯಿ ಸುದರ್ಶನ್ 12 ರಿಷಭ್ ಪಂತ್ ಬ್ಯಾಟಿಂಗ್ 64 ರಜತ್ ಪಾಟೀದಾರ್ 28ಟಿಶೆಪೊ ಮೊರೆಕಿ 12ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.