ಸೋಮವಾರ, ನವೆಂಬರ್ 29, 2021
20 °C
2022ರ ಕಾಮನ್ವೆಲ್ತ್ ಗೇಮ್ಸ್ ಮಹಿಳಾ ಟ್ವೆಂಟಿ–20 ಟೂರ್ನಿ

2022 Commonwealth Games: ಭಾರತ ಸೇರಿ ಆರು ತಂಡಗಳಿಗೆ ಅರ್ಹತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: 2022ರ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳಾ ಟ್ವೆಂಟಿ–20 ಕ್ರಿಕೆಟ್ ಟೂರ್ನಿಗೆ ಭಾರತ ಸೇರಿದಂತೆ ಆರು ತಂಡಗಳು ಅರ್ಹತೆ ಗಳಿಸಿವೆ. ಏಪ್ರಿಲ್‌ 1ರವರೆಗಿನ ಐಸಿಸಿ ರ‍್ಯಾಂಕಿಂಗ್ ಆಧರಿಸಿ ಈ ತಂಡಗಳು ಪ್ರವೇಶ ಗಿಟ್ಟಿಸಿವೆ.

ಆತಿಥೇಯ ರಾಷ್ಟ್ರ ಇಂಗ್ಲೆಂಡ್‌ನೊಂದಿಗೆ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳು ಅರ್ಹತೆ ಗಿಟ್ಟಿಸಿದ್ದು,   ಕೆರಿಬಿಯನ್‌ ತಂಡವೊಂದು ಇವುಗಳನ್ನು ಸೇರಿಕೊಳ್ಳಲಿದೆ. ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

‘ಅರ್ಹತಾ ಪ್ರಕ್ರಿಯೆಯ ಅನ್ವಯ, ಅರ್ಹತಾ ಟೂರ್ನಿಗಳಲ್ಲಿ ವಿಜೇತ ತಂಡವೊಂದು ಕೆರಿಬಿಯನ್ ವಲಯದಿಂದ ಟೂರ್ನಿಗೆ ಆಯ್ಕೆಯಾಗಲಿದೆ.  2022ರ ಜನವರಿ 31ರೊಳಗೆ ನಡೆಯುವ ಅರ್ಹತಾ ಟೂರ್ನಿಯ ಮೂಲಕ ಎಂಟನೇ ತಂಡವನ್ನು ನಿರ್ಧರಿಸಲಾಗುವುದು. ಅದರ ವಿವರಗಳನ್ನು ಸೂಕ್ತ ಸಮಯದಲ್ಲಿ ಪ್ರಕಟಿಸಲಾಗುವುದು‘ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: 

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಸೇರ್ಪಡೆಯಾಗಿರುವುದು ಇದು ಮೊದಲ ಬಾರಿ. ಒಟ್ಟಾರೆ ಕ್ರಿಕೆಟ್‌ ಸೇರ್ಪಡೆ ಎರಡನೇ ಸಲ. 1998ರಲ್ಲಿ ಕ್ವಾಲಾಲಂಪುರದಲ್ಲಿ ನಡೆದ ಕೂಟದಲ್ಲಿ ಪುರುಷರ ತಂಡಗಳು ಆಡಿದ್ದವು. ಆಗ ದಕ್ಷಿಣ ಆಫ್ರಿಕಾ ಚಾಂಪಿಯನ್ ಆಗಿತ್ತು.

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಪಂದ್ಯಗಳು ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿವೆ.

‘ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಮಗೆ ಸ್ಥಾನ ಸಿಕ್ಕಿರುವುದು ಹೆಮ್ಮೆಯ ವಿಷಯ. ಕಳೆದ ವರ್ಷ ನಡೆದ ಐಸಿಸಿ ಟಿ–20  ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದೆವು. ಕಾಮನ್ವೆಲ್ತ್ ಕೂಟದಲ್ಲೂ ಅದೇ ರೀತಿಯ ಸಾಮರ್ಥ್ಯ ತೋರುವ ವಿಶ್ವಾಸವಿದೆ‘ ಎಂದು ಭಾರತ ಮಹಿಳಾ ಟ್ವೆಂಟಿ–20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು