ಗುರುವಾರ , ಡಿಸೆಂಬರ್ 3, 2020
23 °C

ಭಾರತ–ಆಸ್ಟ್ರೇಲಿಯಾ ‘ಪಿಂಕ್’ ಟೆಸ್ಟ್‌ಗೆ 27 ಸಾವಿರ ಪ್ರೇಕ್ಷಕರು; ಕೋವಿಡ್-19 ಭೀತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಅಡಿಲೇಡ್‌ ಓವಲ್‌ನಲ್ಲಿ ನಡೆಯುವ ಪಿಂಕ್‌ ಬಾಲ್‌ ಟೆಸ್ಟ್‌ಗೆ 27,000 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಮಂಗಳವಾರ ಹೇಳಿದೆ. ಈ ಸಂಖ್ಯೆಯು ಕ್ರೀಡಾಂಗಣ ಸಾಮರ್ಥ್ಯದ ಅರ್ಧದಷ್ಟಾಗಿದೆ. ಡಿಸೆಂಬರ್‌ 17ರಂದು ಈ ಪಂದ್ಯ ಆರಂಭವಾಗಲಿದೆ.

ಕೋವಿಡ್‌–19 ಪಿಡುಗಿನಿಂದ ವಿಶ್ವವೇ ನಲುಗಿದೆ. ಕ್ರಿಕೆಟ್‌ ಪಂದ್ಯಗಳನ್ನು ಜೀವಸುರಕ್ಷಾ ವಾತಾವರಣದ (ಬಯೋ ಬಬಲ್‌) ನಡುವೆ, ಖಾಲಿ ಕ್ರೀಡಾಂಗಣಗಳಲ್ಲಿ ಆಯೋಜಿಸಲಾಗುತ್ತಿದೆ. ಆದಾಗ್ಯೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯಲ್ಲಿ ಒಂದಷ್ಟು ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.

ಮೂರು ಏಕದಿನ, ಮೂರು ಟ್ವೆಂಟಿ–20 ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳ ಪೂರ್ಣಪ್ರಮಾಣದ ಸರಣಿಯನ್ನು ಆಡಲು ಭಾರತ ತಂಡವು ಆಸ್ಟ್ರೇಲಿಯಾಕ್ಕೆ ತೆರಳುತ್ತಿದೆ. ಸಿಡ್ನಿಯಲ್ಲಿ ನವೆಂಬರ್‌ 27ರಿಂದ ಏಕದಿನ ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ.

‘ಅಡಿಲೇಡ್‌ ಓವಲ್‌ ಕ್ರೀಡಾಂಗಣ ಸಾಮರ್ಥ್ಯದ ಶೇಕಡಾ 50 ರಷ್ಟು ಅಂದರೆ ದಿನವೊಂದಕ್ಕೆ 27,000 ಟಿಕೆಟ್‌ಗಳು  ಮಾರಾಟಕ್ಕೆ ಲಭ್ಯವಿರುತ್ತವೆ‘ ಎಂದು ಕ್ರಿಕೆಟ್‌ ಡಾಟ್‌ ಕಾಮ್‌ ಎಯು ವೆಬ್‌ಸೈಟ್‌ ವರದಿ ಮಾಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುತ್ತಿರುವ ಮೊದಲ ಪಿಂಕ್‌ ಬಾಲ್ ಟೆಸ್ಟ್‌ ಇದು. ಆಸ್ಟ್ರೇಲಿಯಾ ತನ್ನ ನೆಲದಲ್ಲಿ ಇದುವರೆಗೆ ಇಂತಹ ನಾಲ್ಕು ಪಂದ್ಯಗಳನ್ನು ಆಯೋಜಿಸಿದೆ. 2019ರಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಹಗಲು–ರಾತ್ರಿ ಪಂದ್ಯ ಆಡಿದೆ.

ಮೊದಲ ಟೆಸ್ಟ್‌ನಲ್ಲಿ ಆಡಿದ ಬಳಿಕ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ತಾಯ್ನಾಡಿಗೆ ಮರಳಲಿದ್ದಾರೆ. ಮುಂದಿನ ವರ್ಷದ ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಇರಲು ಬಯಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು