ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ‘ಎ’ ವಿರುದ್ಧ ಮಿಂಚಿದ ಮಯಂಕ್, ಮನೀಷ್, ಭಾರತ ಬಿ ತಂಡಕ್ಕೆ ಪ್ರಶಸ್ತಿ

ಚತುಷ್ಕೋನ ಏಕದಿನ ಕ್ರಿಕೆಟ್ ಟೂರ್ನಿ
Last Updated 29 ಆಗಸ್ಟ್ 2018, 12:34 IST
ಅಕ್ಷರ ಗಾತ್ರ

ಬೆಂಗಳೂರು:ಸರಣಿಯುದ್ದಕ್ಕೂ ಅಜೇಯ ಆಟವಾಡಿದ ಮನೀಷ್ ಪಾಂಡೆ ಫೈನಲ್‌ನಲ್ಲಿಯೂ ತಮ್ಮ ಬ್ಯಾಟಿಂಗ್ ಬಲ ತೋರಿದರು.ಇದರಿಂದಾಗಿ ಭಾರತ ಬಿ ತಂಡವು ಚತುಷ್ಕೋನ ಏಕದಿನ ಸರಣಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ‘ಎ’ ತಂಡವು 50 ಓವರ್‌ಗಳಲ್ಲಿ 225 ರನ್‌ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನತ್ತಿದ ಆತಿಥೇಯ ತಂಡವು 36.3 ಓವರ್‌ಗಳಲ್ಲಿ 1 ವಿಕೆಟ್‌ಗೆ 230 ರನ್‌ ಗಳಿಸಿ ಜಯಿಸಿತು.

ಬ್ಯಾಟಿಂಗ್ ಆರಂಭಿಸಿದ ಮಯಂಕ್ ಅಗರವಾಲ್ (69 ರನ್) ಮತ್ತು ಇಶಾನ್ ಕಿಶನ್ (13) ಉತ್ತಮ ಆರಂಭ ನೀಡಿದರು. ಆದರೆ ನಾಲ್ಕನೇ ಓವರ್‌ನಲ್ಲಿ ಸ್ಟಾನ್‌ಲೇಕ್ ಎಸೆತವನ್ನು ಆಡುವ ಪ್ರಯತ್ನದಲ್ಲಿ ಇಶಾನ್ ಕಿಶನ್ ಪೆಟ್ಟು ತಿಂದರು. ಅವರ ಮಣಿಕಟ್ಟಿಗೆ ಗಾಯವಾಗಿದ್ದರಿಂದ ಪೆವಿಲಿಯನ್‌ಗೆ ಮರಳಿದರು.

ಕ್ರೀಸ್‌ಗೆ ಬಂದ ಶುಭಮನ್ ಗಿಲ್ ಮೊದಲ ಎಸೆತದಲ್ಲಿ ಕ್ಯಾಚಿತ್ತು ಔಟಾಗಿದ್ದರು. ಆದರೆ ಸ್ಟಾನ್‌ಲೇಕ್‌ ನೋಬಾಲ್ ಹಾಕಿದ್ದರಿಂದ ಫ್ರೀ ಹಿಟ್ ಲಭಿಸಿತು. ಅದರಲ್ಲಿ ಬೌಂಡರಿ ಗಳಿಸಿದ ಅವರು ಮಯಂಕ್ ಜೊತೆಗೆ 97 ರನ್‌ಗಳ ಜೊತೆಯಾಟವಾಡಿದರು. ಅರ್ಧಶತಕ ಗಳಿಸಿದ ಮಯಂಕ್ ಔಟಾದ ನಂತರ ಕ್ರೀಸ್‌ಗೆ ಬಂದ ಮನೀಷ್ ಪಾಂಡೆ ಅಬ್ಬರದ ಬ್ಯಾಟಿಂಗ್ ಮಾಡಿದರು.

ಈ ಟೂರ್ನಿಯ ಮೊದಲ ಪಂದ್ಯದಲ್ಲಿ 95,ಎರಡನೇ ಪಂದ್ಯದಲ್ಲಿ 30 ಮತ್ತು ಮೂರನೇ ಪಂದ್ಯದಲ್ಲಿ ಶತಕ ಬಾರಿಸಿ ನಾಟೌಟ್‌ ಆಗಿ ಉಳಿದಿದ್ದ ಪಾಂಡೆ,ಇಲ್ಲಿಯೂ ಬೌಲರ್‌ಗಳಿಗೆ ಸಿಂಹಸ್ವಪ್ನರಾದರು. ಅತ್ಯಂತ ಆಕರ್ಷಕವಾದ ಸ್ಟ್ರೇಟ್‌ ಡ್ರೈವ್,ಚುರುಕಾದ ಕಟ್‌ಗಳ ಮೂಲಕ ಗಮನ ಸೆಳೆದರು. ಕ್ರೀಡಾಂಗಣದಲ್ಲಿ ಸೇರಿದ್ದ ಸುಮಾರು 500 ಪ್ರೇಕ್ಷಕರಿಗೆ ರಸದೌತಣ ನೀಡಿದರು.

ಬೌಲರ್‌ಗಳ ಮಿಂಚು
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ‘ಬಿ’ ತಂಡದ ಸಿದ್ಧಾರ್ಥ್ ಕೌಲ್ (24ಕ್ಕೆ2),ನವದೀಪ್ ಸೈನಿ (33ಕ್ಕೆ2) ಮತ್ತು ಶ್ರೇಯಸ್ ಗೋಪಾಲ್ (50ಕ್ಕೆ3) ಮತ್ತು ದೀಪಕ್ ಹೂಡಾ (41ಕ್ಕೆ2) ಅವರು ಉತ್ತಮ ಬೌಲಿಂಗ್ ಮಾಡಿದರು.ಇದರಿಂದಾಗಿ ಆಸ್ಟ್ರೇಲಿಯಾ ಎ ತಂಡಕ್ಕೆ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಡಾರ್ಚಿ ಶಾರ್ಟ್ (72 ರನ್) ಮತ್ತು ಉಸ್ಮಾನ್ ಖ್ವಾಜಾ (23 ರನ್) ಮೊದಲ ವಿಕೆಟ್‌ಗೆ 51 ರನ್‌ ಸೇರಿಸಿ ಉತ್ತಮ ಆರಂಭ ನೀಡಿದ್ದರು. ಆದರೆ,ಅಲೆಕ್ಸ್‌ ಕ್ಯಾರಿ (53 ರನ್) ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಹರಿಸು ಗರಿಕೆಗಳು ಇದ್ದ ಪಿಚ್‌ನಲ್ಲಿ ಮಧ್ಯಮವೇಗಿಗಳು ತಮ್ಮ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು. ಹದ ಬಿಸಿಲು ಬಿದ್ದ ನಂತರ ಪಿಚ್‌ ಬ್ಯಾಟಿಂಗ್‌ಗೆ ಒಂದಿಷ್ಟು ನೆರವು ನೀಡಲು ಆರಂಭಿಸಿತು. ಆಗ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮಿಂಚಿದರು.

ಸ್ಕೋರ್:ಆಸ್ಟ್ರೇಲಿಯಾ ‘ಎ’ 225 (47.5ಓವರ್‌ಗಳಲ್ಲಿ)
ಡಾರ್ಚಿ ಶಾರ್ಟ್ ಸಿ ಮನೀಷ್ ಪಾಂಡೆ ಬಿ ದೀಪ್ ಹೂಡಾ 72
ಉಸ್ಮಾನ್ ಖ್ವಾಜಾ ಸಿ ಇಶಾನ್ ಕಿಶನ್ ಬಿ ಜಲಜ್ ಸಕ್ಸೆನಾ 23
ಟ್ರಾವಿಸ್ ಹೆಡ್ ಸಿ ಶುಭಮನ್ ಗಿಲ್ ಬಿ ನವದೀಪ್ ಸೈನಿ 00
ಮೆನೂಸ್ ಲಾಬುಚನ್ ಎಲ್‌ಬಿಡಬ್ಲ್ಯು ಬಿ ಶ್ರೆಯಸ್ ಗೋಪಾಲ್ 17
ಅಲೆಕ್ಸ್‌ ಕ್ಯಾರಿ ಸಿ ಇಶಾನ್ ಕಿಶನ್ ಬಿ ಶ್ರೇಯಸ್ ಗೋಪಾಲ್ 53
ಆಷ್ಟನ್ ಆಗರ್ ಸಿ ಮತ್ತು ಬಿ ದೀಪಕ್ ಹೂಡಾ 20
ಜ್ಯಾಕ್ ವೈಲ್ಡ್‌ಮುತ್ ಬಿ ಶ್ರೇಯಸ್ ಗೋಪಾಲ್ 10
ಮೈಕೆಲ್ ನೆಸರ್ ಸಿ ಇಶಾನ್ ಕಿಶನ್ ಬಿ ನವದೀಪ್ ಸೈನಿ 10
ಜೋಲ್ ಪ್ಯಾರಿಸ್ ಬಿ ಇಶಾನ್ ಕಿಶ್ನ ಬಿ ಸಿದ್ಧಾರ್ಥ್‌ ಕೌಲ್ 09
ಮಿಚೆಲ್ ಸ್ವೆಪ್ಸನ್ ಸಿ ಮತ್ತು ಬಿ ಸಿದ್ಧಾರ್ಥ್ ಕೌಲ್ 00
ಬಿಲ್ಲಿ ಸ್ಟಾನ್‌ಲೇಕ್ ಔಟಾಗದೆ 00
ಇತರೆ: 11 (ಲೆಗ್‌ಬೈ 1,ವೈಡ್ 10)
ವಿಕೆಟ್ ಪತನ:
1–51 (ಉಸ್ಮಾನ್; 8.4), 2–56 (ಹೆಡ್; 9.4), 3–106 (ಮಾರ್ನಸ್: 21.1), 4–148 (ಶಾರ್ಟ್: 28.2), 5–192 (ಆಷ್ಟನ್; 38.3), 6–206 (ಅಲೆಕ್ಸ್‌; 41.4), 7–206 (ಜ್ಯಾಕ್; 41.5), 8–221 (ಪ್ಯಾರಿಸ್: 46.3), 9–221 (ಸ್ವೆಪ್ಸನ್: 46.4),10–225 (ಮೈಕಲ್: 47.5).
ಬೌಲಿಂಗ್:ಸಿದ್ಧಾರ್ಥ್ ಕೌಲ್ 5–0–24–2 (ವೈಡ್ 1),ಪ್ರಸಿದ್ಧ ಕೃಷ್ಣ 2–0–23–0,ನವದೀಪ್ ಸೈನಿ 8.5–0–33–2 (ವೈಡ್ 2), ಜಲಜ್ ಸಕ್ಸೆನಾ 9–0–43–1 (ವೈಡ್ 6),ಶ್ರೆಯಸ್ ಗೋಪಾಲ್ 10–0–50–3,ದೀಪಕ್ ಹೂಡಾ 10–0–41–2,ಕೇದಾರ್ ಜಾಧವ್ 3–0–10–0

ಭಾರತ ‘ಬಿ’:1 ವಿಕೆಟ್‌ಗೆ 230 (36.3 ಓವರ್‌ಗಳಲ್ಲಿ)
ಮಯಂಕ್ ಅಗರವಾಲ್ ಬಿ ಆಷ್ಟನ್ ಅಗರ್ 69
ಇಶಾನ್ ಕಿಶನ್ ಗಾಯಗೊಂಡು ನಿವೃತ್ತಿ 13
ಶುಭಮನ್ ಗಿಲ್ಔಟಾಗದೆ 66
ಮನೀಷ್ ಪಾಂಡೆ ಔಟಾಗದೆ 73
ಇತರೆ: 9 (ಲೆಗ್‌ಬೈ 1,ನೋಬಾಲ್ 1, ವೈಡ್ 7)
ವಿಕೆಟ್ ಪತನ:1–110 (ಮಯಂಕ್; 20.2),
ಬೌಲಿಂಗ್: ಬಿಲ್ಲಿ ಸ್ಟಾನ್‌ಲೇಕ್ 6–0–38–0 (ವೈಡ್ 1,ನೋಬಾಲ್ 1), ಜೋಯಲ್ ಪ್ಯಾರಿಸ್ 4–0–22-0- (ವೈಡ್ 1), ಮಾರ್ನಸ್ ನೇಸರ್ 7–1–34–0 (ವೈಡ್ 1), ಆಷ್ಟನ್ ಆಗರ್ 10–0–59–1, ಮಿಚೆಲ್ ಸ್ಟೆಪ್ಸನ್ 6–0–44–0 (ವೈಡ್ 2) ಡಾರ್ಚಿ ಶಾರ್ಟ್ 3.3.–0–32–2 (ವೈಡ್ 2)

ಫಲಿತಾಂಶ: ಭಾರತ ಬಿ ತಂಡಕ್ಕೆ 9 ವಿಕೆಟ್‌ಗಳಿಂದ ಜಯ‌ ಮತ್ತು ಪ್ರಶಸ್ತಿ
ಪಂದ್ಯಶ್ರೇಷ್ಠ: ಮನೀಷ್ ಪಾಂಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT