ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವಿರುದ್ಧದ ಹೋರಾಟಕ್ಕೆ ರಾಜಸ್ಥಾನ್ ರಾಯಲ್ಸ್ ₹7.5 ಕೋಟಿ ದೇಣಿಗೆ

Last Updated 29 ಏಪ್ರಿಲ್ 2021, 11:21 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿಕೊಂಡಿರುವ ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್, ₹7.5 ಕೋಟಿ ದೇಣಿಗೆಯನ್ನು ಘೋಷಿಸಿದೆ.

ದೇಶದಲ್ಲಿ ಕೋವಿಡ್-19 ಎರಡನೇ ಅಲೆ ಕ್ಷಿಪ್ರ ಗತಿಯಲ್ಲಿ ವ್ಯಾಪಿಸಿದ್ದು, ವೈದ್ಯಕೀಯ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ರೋಗಿಗಳಿಗೆ ಆಮ್ಲಜನಕದ ಪೂರೈಕೆ ಸೇರಿದಂತೆ ಚಿಕಿತ್ಸೆಯ ಮೂಲಸೌಕರ್ಯದ ಕೊರತೆ ಎದುರಾಗಿದೆ.

ಕೋವಿಡ್-19ನಿಂದ ಬಳಲುತ್ತಿರುವವರಿಗೆ ತಕ್ಷಣದ ನೆರವಿನ ಭಾಗವಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ತನ್ನ ಮಾಲೀಕರು, ಆಟಗಾರರು ಹಾಗೂ ಮ್ಯಾನೇಜ್‌ಮೆಂಟ್‌ನಿಂದ ₹7.5 ಕೋಟಿ ಬಿಡುಗಡೆ ಮಾಡುವುದಾಗಿ ಘೋಷಿಸುತ್ತೇವೆ. ಇದನ್ನು ರಾಜಸ್ಥಾನ್ ರಾಯಲ್ಸ್ ಫೌಂಡೇಷನ್ ಹಾಗೂ ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮೂಖಾಂತರ ಜಾರಿಗೊಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಬ್ರಿಟಿಷ್ ಏಷ್ಯನ್ ಟ್ರಸ್ಟ್ ಭಾರತದಲ್ಲಿ ಕೌಶಲ್ಯ ಹಾಗೂ ಶಿಕ್ಷಣ ಕ್ಷೇತ್ರ ಸೇರಿದಂತೆ ಅನೇಕ ಉಪಕ್ರಮಗಳಲ್ಲಿ ಭಾರತೀಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಟ್ರಸ್ಟ್‌ನ ಸಂಸ್ಥಾಪಕ ಪ್ರಿನ್ಸ್ ಚಾರ್ಲ್ಸ್, ಭಾರತಕ್ಕಾಗಿ ತುರ್ತು ಆಮ್ಲಜನಕ ಪೂರೈಸುವ ಮನವಿ ಮಾಡಿದ್ದರು. ಇದರಂತೆ ಭಾರತಕ್ಕೆ ಆಕ್ಸಿಜನ್ ಪೂರೈಸಲು ಅಭಿಯಾನ ಪ್ರಾರಂಭಿಸಿದೆ.

ರಾಜಸ್ಥಾನ್ ರಾಯಲ್ಸ್ ನೀಡುವ ದೇಣಿಗೆ ಹಣವು ದೇಶೆದೆಲ್ಲೆಡೆ ನೆರವಾಗಲಿದೆ. ಆದರೂ ರಾಜಸ್ಥಾನದ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT