ಕ್ವಾಲಾಲಂಪುರ: ಓಪನರ್ ಜಿ.ತ್ರಿಶಾ ಅವರ 49 ರನ್ ಮತ್ತು ವೇಗದ ಬೌಲರ್ಗಳ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಇಲ್ಲಿ ನಡೆದ ಮಹಿಳೆಯರ ಅಂಡರ್19 ಟಿ20 ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 60 ರನ್ಗಳಿಂದ ಮಣಿಸಿದ ಭಾರತ ತಂಡವು ಎ ಗುಂಪಿನಿಂದ ಸೂಪರ್ 6 ಹಂತಕ್ಕೆ ಏರಿದೆ.

ಬ್ಯಾಟಿಂಗ್ಗೆ ಕಷ್ಟಕರವಾದ ಪಿಚ್ನಲ್ಲಿ ತ್ರಿಶಾ 44 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ ಗಳಿಸಿದ 49 ರನ್ ಭಾರತ ತಂಡ 118 ರನ್ ಗಳಿಸಿ ಸ್ಪರ್ಧೆ ಒಡ್ಡಲು ನೆರವಾಯಿತು.

119 ರನ್ ಗುರಿ ಬೆನ್ನತ್ತಿದ ಲಂಕಾ ಬ್ಯಾಟರ್ಗಳಿಗೆ ಭಾರತದ ವೇಗಿಗಳಾದ ವಿ.ಜೆ. ಜೋಶಿತಾ ಮತ್ತು ಬನಮ್ ಮೊಹಮ್ಮದ್ ಬಹುವಾಗಿ ಕಾಡಿದರು. 3.2 ಓವರ್ಗಳಲ್ಲಿ 9 ರನ್ಗೆ 4 ವಿಕೆಟ್ ಉರುಳಿಸಿದರು. ನಾಯಕಿ ಮನುಡಿ ನಾನಾಯಕ್ಕರ ಅವರ ರನೌಟ್ ಆಗುವುದರೊಂದಿಗೆ ಲಂಕಾ 12 ರನ್ಗೆ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ, ಚೇತರಿಸಿಕೊಳ್ಳಲೇ ಇಲ್ಲ. 20 ಓವರ್ಗಳ ಅಂತ್ಯಕ್ಕೆ ಲಂಕಾ 9 ವಿಕೆಟ್ ನಷ್ಟಕ್ಕೆ 58 ರನ್ ಗಳಿಸಲಷ್ಟೇ ಶಕ್ತವಾಯಿತು.

ರಶ್ಮಿಕಾ ಸೆವ್ವಂಡಿ ಗಳಿಸಿದ 15 ರನ್ ಲಂಕಾ ಪರ ಬ್ಯಾಟರ್ ಗಳಿಸಿದ ಗರಿಷ್ಠ ಮೊತ್ತವಾಗಿದೆ. ಅಲ್ಲದೆ, ಇದೊಂದೇ ಎರಡಂಕಿಯ ಮೊತ್ತವಾಗಿದೆ.

ಭಾರತದ ಪರ ವೇಗಿಗಳಾದ ವಿ.ಜೆ. ಜೋಶಿತಾ ಮತ್ತು ಬನಮ್ ಮೊಹಮ್ಮದ್, ಸ್ಪಿನ್ನರ್ ಪರುಣಿಕಾ ಸಿಸೋಡಿಯಾ ತಲಾ 2 ವಿಕೆಟ್ ಉರುಳಿಸಿದರು.

ಗುಂಪು ಹಂತದ ಎಲ್ಲ ಮೂರು ಪಂದ್ಯಗಳನ್ನು ಜಯಿಸುವ ಮೂಲಕ ಭಾರತ ತಂಡ ಮುಂದಿನ ಹಂತಕ್ಕೆ(ಸೂಪರ್ 6) ಪ್ರವೇಶಿಸಿತು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್ಗಳಲ್ಲಿ 9ಕ್ಕೆ118 (ಜಿ. ತ್ರಿಷಾ 49, ಮಿಥಿಲಾ ವಿನೋದ್ 16, ವಿ.ಜೆ. ಜೋಷಿತಾ 14, ಪ್ರಮುದಿ ಮೆತ್ಸಾರಾ 10ಕ್ಕೆ2, ಲಿಮಾಂಸಾ ತಿಲಕರತ್ನ 14ಕ್ಕೆ2, ಅಸೇನಿ ತೆಲಗುಣ 14ಕ್ಕೆ2, ಅಸೆನಿ ತಲಗುನೆ 24ಕ್ಕೆ2) ಶ್ರೀಲಂಕಾ : 20 ಓವರ್ಗಳಲ್ಲಿ 9 ವಿಕೆಟ್ಗಳಿಗೆ 58 (ರಶ್ಮಿಕಾ ಸೆವಾಂದಿ 15, ಶಬನಮ್ ಮೊಹಮ್ಮದ್ ಶಕೀಲ್ 9ಕ್ಕೆ2, ವಿ.ಜೆ. ಜೋಶಿತಾ 17ಕ್ಕೆ2, ಪರುಣಿಕಾ ಸಿಸೋಡಿಯಾ 7ಕ್ಕೆ2)

ಫಲಿತಾಂಶ: ಭಾರತ ತಂಡಕ್ಕೆ 60 ರನ್ಗಳ ಜಯ. ಪಂದ್ಯಶ್ರೇಷ್ಠ: ಜಿ. ತ್ರಿಷಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.