ಕಟಕ್: ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಆಲ್ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ, 100 ಸಿಕ್ಸರ್ಗಳ ಸಾಧನೆ ಮಾಡಿದ್ದಾರೆ.

ಆ ಮೂಲಕ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಅಲ್ಲದೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.

ಕಟಕ್ನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಹಾರ್ದಿಕ್ ಈ ಮೈಲಿಗಲ್ಲು ತಲುಪಿದರು.

ತಮ್ಮ 121ನೇ ಪಂದ್ಯದಲ್ಲಿ (95 ಇನಿಂಗ್ಸ್) ಹಾರ್ದಿಕ್ ಈ ಸಾಧನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ ಪಾಂಡ್ಯ 28 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗುಳಿದರು.

ಪಾಂಡ್ಯ ಆಲ್ರೌಂಡ್ ಆಟದ ನೆರವಿನಿಂದ ಭಾರತ 101 ರನ್ಗಳ ಭರ್ಜರಿ ಗೆಲುವು ದಾಖಲಿಸಿದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ರೋಹಿತ್ ಸಿಕ್ಸರ್ಗಳ ದ್ವಿಶತಕ...

ಚುಟುಕು ಕ್ರಿಕೆಟ್ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ಅಲ್ಲದೆ 200ಕ್ಕೂ ಸಿಕ್ಸರ್ ಗಳಿಸಿದ ಏಕಮಾತ್ರ ಬ್ಯಾಟರ್ ಎನಿಸಿದ್ದಾರೆ.

ರೋಹಿತ್ ಶರ್ಮಾ ಒಟ್ಟು 205 ಸಿಕ್ಸರ್ಗಳನ್ನು ಸಿಡಿಸಿದ್ದಾರೆ.

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಭಾರತೀಯ ಬ್ಯಾಟರ್ಗಳ ಪಟ್ಟಿ:

ರೋಹಿತ್ ಶರ್ಮಾ: 205

ಸೂರ್ಯಕುಮಾರ್ ಯಾದವ್: 155

ವಿರಾಟ್ ಕೊಹ್ಲಿ: 124

ಹಾರ್ದಿಕ್ ಪಾಂಡ್ಯ: 100

ಕೆ.ಎಲ್. ರಾಹುಲ್: 99

ಯುವರಾಜ್ ಸಿಂಗ್: 74

ಅಭಿಷೇಕ್ ಶರ್ಮಾ: 67

ಸುರೇಶ್ ರೈನಾ: 58

ಸಂಜು ಸ್ಯಾಮ್ಸನ್: 56

ತಿಲಕ್ ವರ್ಮಾ: 55

ಮಹೇಂದ್ರ ಸಿಂಗ್ ಧೋನಿ: 52

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಾಧಕರು:

ರೋಹಿತ್ ಶರ್ಮಾ (ಭಾರತ): 205

ಮುಹಮ್ಮದ್ ವಾಸೀಂ (ಯುಎಇ): 187

ಮಾರ್ಟಿನ್ ಗಪ್ಟಿನ್ (ನ್ಯೂಜಿಲೆಂಡ್): 173

ಜೋಸ್ ಬಟ್ಲರ್ (ಇಂಗ್ಲೆಂಡ್): 172

ಸೂರ್ಯಕುಮಾರ್ ಯಾದವ್ (ಭಾರತ): 155

.IND vs SA Highlights: ದ.ಆಫ್ರಿಕಾ ಕಳಪೆ ಸಾಧನೆ; ಭಾರತ ಗೆಲುವಿನ ಶುಭಾರಂಭ.IND vs SA T20 | ಹಾರ್ದಿಕ್ ಆಲ್ರೌಂಡ್ ಆಟಕ್ಕೆ ಜಯದ ಮೆರುಗು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.