ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC | ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಜಯ

ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ಅರ್ಧಶತಕ
Published 1 ಜೂನ್ 2024, 18:31 IST
Last Updated 1 ಜೂನ್ 2024, 18:31 IST
ಅಕ್ಷರ ಗಾತ್ರ

ನ್ಯೂಯಾರ್ಕ್: ರಿಷಭ್ ಪಂತ್ ಅರ್ಧಶತಕ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿನ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶನಿವಾರ ಬಾಂಗ್ಲಾ ಎದುರು ನಡೆದ ಅಭ್ಯಾಸ ಪಂದ್ಯದಲ್ಲಿ 60 ರನ್‌ಗಳಿಂದ ಜಯ ಸಾಧಿಸಿತು.

ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಿಷಭ್ (53; 32ಎ, 4X4, 6X4) ಹಾಗೂ ಪಾಂಡ್ಯ (ಔಟಾಗದೆ 40; 23ಎ, 4X2, 6X4) ಅವರ ಮಿಂಚಿನ ಬ್ಯಾಟಿಂಗ್‌ನಿಂದ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 182 ರನ್ ಗಳಿಸಿತು. 

ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಅರ್ಷದೀಪ್‌ ಸಿಂಗ್‌ ಆರಂಭದಲ್ಲೇ ಆಘಾತ ನೀಡಿದರು. 7 ರನ್ ಗಳಿಸುವಷ್ಟರಲ್ಲಿ ಸೌಮ್ಯ ಸರ್ಕಾರ್‌ (0), ಲಿಟ್ಟನ್‌ ದಾಸ್‌ (6) ಅವರನ್ನು ವಾಪಸ್‌ ಕಳುಹಿಸಿದರು. ನಾಯಕ ನಜ್ಮುಲ್ ಹುಸೇನ್ ಶಾಂಟೊ (0) ಮತ್ತು ತೌಹಿದ್ ಹೃದಯ್‌ (13) ನಿರಾಸೆ ಮೂಡಿಸಿದರು. ಶಕೀಬ್‌ ಅಲ್‌ ಹಸನ್‌ 28 ಮತ್ತು ಮಹಮ್ಮದುಲ್ಲಾ (40) ತುಸು ಹೋರಾಟ ತೋರಿದರು. ತಂಡವು 20 ಓವರ್‌ಗಳಲ್ಲಿ ರನ್‌ 9 ವಿಕೆಟ್‌ಗೆ 122 ಗಳಿಸಿ ಹೋರಾಟ ಮುಗಿಸಿತು.

ಇದಕ್ಕೆ ಮೊದಲು ಭಾರತ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಎರಡನೇ ಓವರ್‌ನಲ್ಲಿಯೇ ಸಂಜು ಸ್ಯಾಮ್ಸನ್ (1 ರನ್) ಅವರನ್ನು ಶರಿಫುಲ್  ಇಸ್ಲಾಂ ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಈ ಹಂತದಲ್ಲಿ ರೋಹಿತ್ (23; 19ಎ) ಜೊತೆಗೂಡಿದ ಪಂತ್ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 48 ರನ್ ಸೇರಿಸಿದರು. 

ಏಳನೇ ಓವರ್‌ನಲ್ಲಿ ರೋಹಿತ್  ಔಟಾದರು. ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ (31; 18ಎ) ಅವರು ಕಾಣಿಕೆ ನೀಡಿದರು. ಹಾರ್ದಿಕ್ ಮಾತ್ರ ನಾಲ್ಕು ಸಿಕ್ಸರ್ ಸಿಡಿಸಿ ಮಿಂಚಿದರು. 

ಸಂಕ್ಷಿಪ್ತ ಸ್ಕೋರು:

ಭಾರತ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 182 (ರೋಹಿತ್ ಶರ್ಮಾ 23, ರಿಷಭ್ ಪಂತ್ ಗಾಯಗೊಂಡು ನಿವೃತ್ತಿ 53, ಸೂರ್ಯಕುಮಾರ್ ಯಾದವ್ 31, ಹಾರ್ದಿಕ್ ಪಾಂಡ್ಯ ಔಟಾಗದೆ 40, ಮೆಹದಿ ಹಸನ್ 22ಕ್ಕೆ1, ಶರೀಫುಲ್ ಇಸ್ಲಾಂ 26ಕ್ಕೆ1) 

ಬಾಂಗ್ಲಾದೇಶ: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 122 (ಶಕೀಬ್‌ ಅಲ್‌ ಹಸನ್‌ 28, ಮಹಮ್ಮದುಲ್ಲಾ 40, ಅರ್ಷದೀಪ್‌ ಸಿಂಗ್‌ 12ಕ್ಕೆ 2, ಶಿವಂ ದುಬೆ 11ಕ್ಕೆ 2, ಜಸ್‌ಪ್ರೀತ್‌ ಬೂಮ್ರಾ 12ಕ್ಕೆ 1, ಮೊಹಮ್ಮದ್‌ ಸಿರಾಜ್‌ 17ಕ್ಕೆ 1, ಅಕ್ಷರ್‌ ಪಟೇಲ್‌ 10ಕ್ಕೆ 1). ಫಲಿತಾಂಶ: ಭಾರತಕ್ಕೆ 62 ರನ್‌ಗಳ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT