ಗುರುವಾರ , ಫೆಬ್ರವರಿ 27, 2020
19 °C

ಮೊದಲ ಪಂದ್ಯದಲ್ಲಿ ಪಂತ್, 2ನೇ ಪಂದ್ಯದಲ್ಲಿ ಧವನ್‌ಗೆ ಪೆಟ್ಟು ನೀಡಿದ ಪ್ಯಾಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ರಾಜ್‌ಕೋಟ್ : ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರಿಗೆ ಶುಕ್ರವಾರ ಬ್ಯಾಟಿಂಗ್‌ ಮಾಡುವಾಗ ಪಕ್ಕೆಲುಬಿಗೆ ಚೆಂಡು ಬಿದ್ದು ಪೆಟ್ಟಾಗಿದೆ.

ಇಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡುವಾಗ ಪ್ಯಾಟ್‌ ಕಮಿನ್ಸ್‌ ಹಾಕಿದ ಹತ್ತನೇ ಓವರ್‌ನಲ್ಲಿ ಬೌನ್ಸರ್‌ ಎಸೆತವೊಂದು ಬಡಿಯಿತು. ನೋವಿನಲ್ಲಿಯೂ ಆಟ ಮುಂದುವರಿಸಿದ ಅವರು 96 ರನ್‌ ಗಳಿಸಿ ಔಟಾದರು. ಅದರಿಂದಾಗಿ ಅವರು ಫೀಲ್ಡಿಂಗ್ ಮಾಡಲಿಲ್ಲ. ಬದಲಿಗೆ ಯಜುವೇಂದ್ರ ಚಾಹಲ್ ಆಡಿದರು.

ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕಮಿನ್ಸ್‌ ಎಸೆತ ಬೌನ್ಸರ್‌ ಹೆಲ್ಮೆಟ್‌ಗೆ ಬಡಿದಿತ್ತು. ಹೀಗಾಗಿ ಅವರ ಬದಲು ಕೆ.ಎಲ್‌.ರಾಹುಲ್‌ ವಿಕೆಟ್‌ ಕೀಪಿಂಗ್ ಜವಬ್ದಾರಿ ನಿರ್ವಹಿಸಿದ್ದರು.

ಸದ್ಯ ಚಿಕಿತ್ಸೆ ಪಡೆಯುತ್ತಿರುವ ಅವರು ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದರು. ಮೂರನೇ ಪಂದ್ಯದಲ್ಲಿ ಆಡುವ ಬಗ್ಗೆ ಸದ್ಯ ಮಾಹಿತಿ ಇಲ್ಲ.

ಇದನ್ನೂ ಓದಿ: ತಲೆಗೆ ಪೆಟ್ಟು: ಎರಡನೇ ಏಕದಿನ ಪಂದ್ಯಕ್ಕೆ ರಿಷಭ್ ಪಂತ್‌ ಅಲಭ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು