ಗುರುವಾರ , ಜನವರಿ 28, 2021
18 °C

IND vs AUS | ಎರಡನೇ ಏಕದಿನ ಪಂದ್ಯ: ಭಾರತಕ್ಕೆ 390 ರನ್‌ಗಳ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Smith

ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಅದ್ಭುತ ಪ್ರದರ್ಶನ ನೀಡಿದ್ದು ಟೀಂ ಇಂಡಿಯಾಗೆ 390 ರನ್‌ಗಳ ಗುರಿ ನೀಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ನಿಗದಿತ  50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 389 ರನ್ ಕಲೆ ಹಾಕಿದೆ.

ಆರಂಭಿಕ ದಾಂಡಿಗರಾದ ಆ್ಯರನ್  ಫಿಂಚ್ ಮತ್ತು ಡೇವಿಡ್ ವಾರ್ನರ್ ಉತ್ತಮ ಜತೆಯಾಟವಾಡಿದ್ದು ಈ ಜೋಡಿ 142 ರನ್ ಕಲೆ ಹಾಕಿತ್ತು. 23ನೇ ಓವರ್‌ನಲ್ಲಿ ಶಮಿ  ಎಸೆತಕ್ಕೆ ವಿರಾಟ್‌ ಕೊಹ್ಲಿಗೆ ಕ್ಯಾಚಿತ್ತು ಫಿಂಚ್ ಔಟಾಗಿದ್ದಾರೆ. 26ನೇ ಓವರ್‌ನಲ್ಲಿ  ಡೇವಿಡ್ ವಾರ್ನರ್ ಅನ್ನು ರನ್ ಔಟ್ ಮಾಡುವ ಮೂಲಕ ಟೀಂ ಇಂಡಿಯಾ ಆಸ್ಟ್ರೇಲಿಯಾದ ರನ್ ಓಟಕ್ಕೆ ಲಗಾಮು ಹಾಕಿತು.

42ನೇ ಓವರ್‌ನಲ್ಲಿ ಹಾರ್ದಿಕ್  ಪಾಂಡ್ಯ ಎಸೆತಕ್ಕೆ ಶಮಿಗೆ ಕ್ಯಾಚಿತ್ತು  ಸ್ಮಿತ್  ವಿಕೆಟ್ ಕಳೆದುಕೊಂಡರು. 64 ಎಸೆತಗಳಲ್ಲಿ 104  ರನ್  ದಾಖಲಿಸಿದ ಸ್ಮಿತ್, 14 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ್ದಾರೆ. 49 ನೇ ಓವರ್‌ನಲ್ಲಿ ಬೂಮ್ರಾ ಮಾರ್ನಸ್ ಲಾಬುಶೇನ್ (70) ವಿಕೆಟ್ ಕಬಳಿಸಿದರು.

 

 

ಸ್ಮಿತ್ ಅವರ ಶತಕ, ಫಿಂಚ್,ವಾರ್ನರ್  ಮಾರ್ನಸ್ ಲಾಬುಶೇನ್ ಮತ್ತು ಮ್ಯಾಕ್ಸ್‌ವೆಲ್ ಅವರ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತ ದಾಖಲಿಸಿದೆ.

ಆಸ್ಟ್ರೇಲಿಯಾ  ಸ್ಕೋರ್ : 4 ವಿಕೆಟ್  ನಷ್ಟಕ್ಕೆ 389

ವಾರ್ನರ್ - 77 ಎಸೆತಗಳಲ್ಲಿ 83

ಪಿಂಚ್- 69 ಎಸೆತಗಳಲ್ಲಿ 60

ಸ್ಮಿತ್ - 64 ಎಸೆತಗಳಲ್ಲಿ 104

ಲಾಬುಶೇನ್ - 61 ಎಸೆತಗಳಲ್ಲಿ 70

ಮ್ಯಾಕ್ಸ್‌ವೆಲ್ - 29 ಎಸೆತಗಳಲ್ಲಿ 63  (ಔಟಾಗದೆ )

ಹೆನ್ರಿಕಸ್- 1 ಎಸೆತದಲ್ಲಿ  2 (ಔಟಾಗದೆ)

ಭಾರತದ ಪರವಾಗಿ  ಮೊಹಮ್ಮದ್ ಶಮಿ,ಹಾರ್ದಿಕ್  ಪಾಂಡ್ಯ ಮತ್ತು ಬೂಮ್ರಾ ತಲಾ ಒಂದು ವಿಕೆಟ್ ಗಳಿಸಿದ್ದಾರೆ.

 

ಆಸ್ಟ್ರೇಲಿಯಾ ತಂಡದಲ್ಲಿ ಮಾರ್ಕಸ್ ಸ್ಟೊಯಿನಿಸ್ ಬದಲು ಮೊಯಿಸೆಸ್ ಹೆನ್ರಿಕಸ್ ಅವರಿಗೆ ಅವಕಾಶ ನೀಡಲಾಗಿದೆ. ಭಾರತದ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಕೆ.ಎಲ್‌.ರಾಹುಲ್ (ಉಪನಾಯಕ–ವಿಕೆಟ್ ಕೀಪರ್‌),ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್‌, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಡೇವಿಡ್‌ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್‌, ಮೊಯಿಸೆಸ್ ಹೆನ್ರಿಕಸ್‌, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್)‌, ಪ್ಯಾಟ್ ಕಮಿನ್ಸ್, ಮಿಷೆಲ್ ಸ್ಟಾರ್ಕ್‌, ಆ್ಯಡಂ ಜಂಪಾ, ಜೋಶ್ ಹ್ಯಾಜಲ್‌ವುಡ್‌, ಸೀನ್ ಅಬೋಟ್‌, ಆ್ಯಶ್ಟನ್ ಅಗರ್‌, ಕ್ಯಾಮರೂನ್ ಗ್ರೀನ್‌, ಮೊಯಸಸ್ ಹೆನ್ರಿಕ್ಸ್‌, ಆ್ಯಂಡ್ರ್ಯೂ ಟೈ, ಡ್ಯಾನಿಯಲ್ ಸ್ಯಾಮ್ಸ್‌, ಮ್ಯಾಥ್ಯೂ ವೇಡ್‌ (ವಿಕೆಟ್ ಕೀಪರ್)

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು