ಎರಡಂಕಿ ದಾಟಿದ್ದು ಇಬ್ಬರೇ!
ಯಶಸ್ವಿ ಜೈಸ್ವಾಲ್ ಮತ್ತು ರಿಷಭ್ ಪಂತ್ ಹೊರತುಪಡಿಸಿ ಯಾವೊಬ್ಬ ಬ್ಯಾಟರ್, ಈ ಇನಿಂಗ್ಸ್‌ನಲ್ಲಿ ಎರಡಂಕಿ ಮೊತ್ತ ಗಳಿಸಲಲ್ಲ. ರೋಹಿತ್ 9 ರನ್ ಗಳಿಸಿದರೆ, ಕೊಹ್ಲಿ ಆಟ 5 ರನ್‌ಗೆ ಕೊನೆಯಾಯಿತು. ರವೀಂದ್ರ ಜಡೇಜ 2, ನಿತೀಶ್ ಕುಮಾರ್ 1, ಆಕಾಶ್ ದೀಪ್ 7 ರನ್ ಗಳಿಸಿದರು. ರಾಹುಲ್, ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಸೊನ್ನೆ ಸುತ್ತಿದರು. 45 ಎಸೆತಗಳಲ್ಲಿ 5 ರನ್ ಗಳಿಸಿದ ವಾಷಿಂಗ್ಟನ್ ಸುಂದರ್ ಅಜೇಯರಾಗಿ ಉಳಿದರು.