ಮಂಗಳವಾರ, ಆಗಸ್ಟ್ 16, 2022
22 °C

ಪುರುಷರ ಟೆಸ್ಟ್ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್ ಕ್ಲೇರ್ ಪೊಲೊಸಾಕ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಆಸ್ಟ್ರೇಲಿಯಾದ ಕ್ಲೇರ್ ಪೊಲೊಸಾಕ್ ಗುರುವಾರ ಆರಂಭವಾಗುವ ಟೆಸ್ಟ್‌ ಪಂದ್ಯದಲ್ಲಿ ನಾಲ್ಕನೇ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಪುರುಷರ ಟೆಸ್ಟ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸಲಿರುವ ಮೊದಲ ಮಹಿಳಾ ಅಂಪೈರ್ ಆಗಿದ್ದಾರೆ. 32 ವರ್ಷದ ಕ್ಲೇರ್ ನ್ಯೂ ಸೌತ್‌ವೇಲ್ಸ್‌ನವರು.

ಇದನ್ನೂ ಓದಿ: 

 2019ರಲ್ಲಿ ನಮಿಬಿಯಾ ಮತ್ತು ಓಮನ್ ನಡುವಣ ನಡೆದಿದ್ದ ಐಸಿಸಿ ಡಿವಿಷನ್ 2 ಲೀಗ್  ಪುರುಷರ ಏಕದಿನ ಪಂದ್ಯದಲ್ಲಿ ಆನ್‌ಫೀಲ್ಡ್ ಅಂಪೈರ್ ಆಗಿ ಕ್ಲೇರ್ ಕಾರ್ಯನಿರ್ವಹಿಸಿದ್ದರು.

ಸಿಡ್ನಿ ಟೆಸ್ಟ್‌ನಲ್ಲಿ ಪಾಲ್ ರೀಫೆಲ್ ಮತ್ತು ಪಾಲ್ ವಿಲ್ಸನ್ ಆನ್‌ಫೀಲ್ಡ್‌ ಆಂಪೈರ್‌ಗಳಾಗಿದ್ದಾರೆ. ಬ್ರೂಸ್ ಆಕ್ಸೆನ್‌ಫೋರ್ಡ್‌ ಟಿವಿ ಅಂಪೈರ್ ಆಗಿದ್ದಾರೆ. ಮ್ಯಾಚ್‌ ರೆಫರಿಯಾಗಿ ಡೇವಿಡ್ ಬೂನ್  ನೇಮಕವಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು