ಅಡಿಲೇಡ್: ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ 157 ರನ್ಗಳ ಮುನ್ನಡೆಗಳಿಸಿದೆ.

ಅಡಿಲೇಡ್ನಲ್ಲಿ ನಡೆಯುತ್ತಿರುವ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ನಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 337 ರನ್ಗಳಿಸಿತು. ಈ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿತು.

ಆಸ್ಟ್ರೇಲಿಯಾದ ಬ್ಯಾಟರ್ಗಳಾದ ಮಾರ್ನಸ್ ಲಾಬುಷೇನ್ (64) ಅರ್ಧಶತಕ ಹಾಗೂ ಟ್ರಾವಿಸ್ ಹೆಡ್ (140) ಶತಕದ ಸಾಧನೆ ಮಾಡಿದರು. ಉಳಿದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಲಿಲ್ಲ. ಭಾರತ ಮೊದಲ ಇನ್ನಿಂಗ್ಸ್ನಲ್ಲಿ 180 ರನ್ಗಳಿಗೆ ಆಲೌಟ್ ಆಗಿತ್ತು. ಆಸೀಸ್ ಪಡೆ 157 ರನ್ಗಳ ಮುನ್ನಡೆ ಪಡೆದಿದೆ.

ಬೂಮ್ರಾಗೆ ನಾಲ್ಕು ವಿಕೆಟ್...

ಭಾರತದ ಪರ ಮಗದೊಮ್ಮೆ ಪರಿಣಾಮಕಾರಿ ಬೌಲಿಂಗ್ ಸಂಘಟಿಸಿದ ಬಲಗೈ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ನಾಲ್ಕು ವಿಕೆಟ್ಗಳನ್ನು ಗಳಿಸಿದ್ದಾರೆ. ಸಿರಾಜ್ ಕೂಡ 4 ವಿಕೆಟ್ ಪಡೆದರು.
.Pink Ball Test: ಸ್ಟಾರ್ಕ್ ಬಿರುಗಾಳಿಗೆ ಕುಸಿದ ರೋಹಿತ್ ಬಳಗ.ICC Test Rankings: ಅಗ್ರಸ್ಥಾನಕ್ಕೇರಿದ ಬೂಮ್ರಾ, ಜೈಸ್ವಾಲ್ ನಂ.2 .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.