ಶನಿವಾರ, ಜೂನ್ 19, 2021
23 °C

IND vs BAN | ಪಿಂಕ್ ಟೆಸ್ಟ್‌ನಲ್ಲಿ ವೇಗದ ಭರಾಟೆ: ಬೆದರಿದ ಬಾಂಗ್ಲಾ ಹುಲಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಐತಿಹಾಸಿಕ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಬಿಗುವಿನ ದಾಳಿ ನಡೆಸಿದ ಭಾರತ ಬೌಲರ್‌ಗಳು ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳ ಮೇಲೆ ಸವಾರಿ ನಡೆಸಿದ್ದಾರೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಪ್ರವಾಸಿ ಪಡೆ ಊಟದ ವಿರಾಮದ ಹೊತ್ತಿಗೆ ಕೇವಲ 73 ರನ್‌ ಗಳಿಸಿ ಪ್ರಮುಖ 6 ವಿಕೆಟ್‌ ಕಳೆದುಕೊಂಡಿದೆ.

ಇದನ್ನೂ ಓದಿ: ಟಾಸ್‌ ಗೆದ್ದ ಬಾಂಗ್ಲಾ ಬ್ಯಾಟಿಂಗ್‌ ಆಯ್ಕೆ

ಬಾಂಗ್ಲಾ ಪರ ಆರಂಭಿಕ ಬ್ಯಾಟ್ಸ್‌ಮನ್‌ ಶಾದಮನ್‌ ಇಸ್ಲಾಂ(29), ಲಿಟನ್ ದಾಸ್‌ ಹೊರತು ಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. ಇಸ್ಲಾಂ ಜೊತೆ ಇನಿಂಗ್ಸ್‌ ಆರಂಭಿಸಿದ ಇಮ್ರುಲ್‌ ಕಯೆಸ್‌ 4 ರನ್‌ಗಳಿಸಿದರೆ, ಅನುಭವಿ ಮೊಹಮದುಲ್ಲಾ 6 ರನ್‌ ಗಳಿಸಿ ಔಟಾದರು. ನಾಯಕ ಮೊಮಿನುಲ್‌ ಹಕ್‌, ಮೊಹಮದ್‌ ಮಿಥುನ್‌ ಹಾಗೂ ಅನುಭವಿ ಮುಷಿಕುರ್‌ ರಹೀಂ ಸೊನ್ನೆ ಸುತ್ತಿದರು.

ಇದನ್ನೂ ಓದಿ: ಹಾಕಿ ಚೆಂಡಿನಂತೆ ಭಾರವಾಗಿದೆ: ವಿರಾಟ್

ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿರುವ ಮೊಮಿನುಲ್‌ ಬಳಗಕ್ಕೆ ಕೆಳಕ್ರಮಾಂಕದಲ್ಲಿ ದಾಸ್‌ ಭರವಸೆಯಾಗಿದ್ದಾರೆ. 24ರನ್‌ ಗಳಿಸಿ ಆಡುತ್ತಿರುವ ಅವರು ಇನ್ನೂ ಖಾತೆ ತೆರೆಯದ ನಯೀನ್‌ ಹಸನ್‌ ಜೊತೆ ಕ್ರಿಸ್‌ನಲ್ಲಿದ್ದಾರೆ.

ಪ್ರವಾಸಿ ಪಡೆಯ ಆರೂ ವಿಕೆಟ್‌ಗಳನ್ನು ವೇಗಿಗಳೇ ಹಂಚಿಕೊಂಡರು. ಉಮೇಶ್‌ ಯಾದವ್‌ ಮೂರು, ಇಶಾಂತ್‌ ಶರ್ಮಾ ಎರಡು ಮತ್ತು ಮೊಹಮದ್‌ ಶಮಿ ಒಂದು ವಿಕೆಟ್ ಕಬಳಿಸಿದ್ದಾರೆ.

ಮತ್ತಷ್ಟು ಸುದ್ದಿಗಳು: ಐತಿಹಾಸಿಕ ಪಿಂಕ್‌ ಟೆಸ್ಟ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು