ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಜೈಸ್ವಾಲ್ ಅರ್ಧಶತಕ; ಟೀ ವಿರಾಮಕ್ಕೆ ಭಾರತ 131/4

Published 24 ಫೆಬ್ರುವರಿ 2024, 9:01 IST
Last Updated 24 ಫೆಬ್ರುವರಿ 2024, 9:01 IST
ಅಕ್ಷರ ಗಾತ್ರ

ರಾಂಚಿ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಯುವ ಭರವಸೆಯ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಕರ್ಷಕ ಅರ್ಧಶತಕದ ಹೊರತಾಗಿಯೂ ಟೀಮ್ ಇಂಡಿಯಾ ಹಿನ್ನಡೆಗೊಳಗಾಗಿದೆ.

ಇಂಗ್ಲೆಂಡ್‌ ತಂಡದ 353 ರನ್‌ಗಳಿಗೆ ಉತ್ತರವಾಗಿ ಭಾರತ ತಂಡವು ಎರಡನೇ ದಿನದಾಟದ ಟೀ ವಿರಾಮದ ಹೊತ್ತಿಗೆ 38 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದೆ.

ಅಜೇಯ 54 ರನ್ ಗಳಿಸಿರುವ ಜೈಸ್ವಾಲ್ ಹಾಗೂ ಸರ್ಫರಾಜ್ ಖಾನ್ (1*) ಕ್ರೀಸಿನಲ್ಲಿದ್ದಾರೆ. ಇನಿಂಗ್ಸ್ ಮುನ್ನಡೆಗಿನ್ನು ಆರು ವಿಕೆಟ್ ಬಾಕಿ ಉಳಿದಿರುವಂತೆಯೇ 222 ರನ್ ಗಳಿಸಬೇಕಿದೆ.

ಭಾರತಕ್ಕೆ ನಾಯಕ ರೋಹಿತ್ ಶರ್ಮಾ (1) ವಿಕೆಟ್ ಬೇಗನೇ ನಷ್ಟವಾಯಿತು. ಎರಡನೇ ವಿಕೆಟ್‌ಗೆ ಜೈಸ್ವಾಲ್ ಹಾಗೂ ಶುಭಮನ್ ಗಿಲ್ 82 ರನ್ ಜೊತೆಯಾಟದಲ್ಲಿ ಭಾಗಿಯಾದರು.

ಆದರೆ ಗಿಲ್ ಔಟ್ ಆದ ಬೆನ್ನಲ್ಲೇ ಭಾರತ ದಿಢೀರ್ ಪತನವನ್ನು ಕಂಡಿತು. ರಜತ್ ಪಾಟೀದಾರ್ (17) ಹಾಗೂ ರವೀಂದ್ರ ಜಡೇಜ (12) ವೈಫಲ್ಯವನ್ನು ಅನುಭವಿಸಿದರು.

ಮತ್ತೊಂದೆಡೆ ಇದೇ ಸರಣಿಯಲ್ಲಿ ಸತತ ಎರಡು ದ್ವಿಶತಕಗಳ ಸಾಧನೆ ಮಾಡಿರುವ ಜೈಸ್ವಾಲ್, ಮಗದೊಂದು ಆಕರ್ಷಕ ಅರ್ಧಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಕೈಚಳಕ ತೋರಿದ 20ರ ಹರೆಯದ ಶೋಯಬ್ ಬಷೀರ್ ಮೂರು ವಿಕೆಟ್ ಕಬಳಿಸಿದರು.

ಈ ಮೊದಲು ಇಂಗ್ಲೆಂಡ್ 353ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಜೋ ರೂಟ್ 122 ರನ್ ಗಳಿಸಿ ಅಜೇಯರಾಗುಳಿದರು. ಓಲಿ ರಾಬಿನ್ಸನ್ 58 ರನ್ ಗಳಿಸಿ ಮಿಂಚಿದರು.

ಭಾರತದ ಪರ ರವೀಂದ್ರ ಜಡೇಜ ನಾಲ್ಕು, ಆಕಾಶ್ ದೀಪ್ ಮೂರು ಮತ್ತು ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT