ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಅವರ ಆಕ್ರಮಣಕಾರಿ ವರ್ತನೆಯು ಚರ್ಚೆ ಹುಟ್ಟುಹಾಕಿದೆ. ಆದರೆ, ಗಿಲ್ ಅವರು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸ್ಪಷ್ಟತೆ ಹೊಂದಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಾರ್ಡ್ಸ್ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ, ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಬೆನ್ ಡಕೆಟ್ 90 ಸೆಕೆಂಡ್ ತಡವಾಗಿ ಕ್ರೀಸ್ಗೆ ಬಂದಿದ್ದರು. ಈ ವೇಳೆ, ಗಿಲ್ ಅವರು ಡಕೆಟ್ ಜೊತೆಗಾರ ಜಾಕ್ ಕ್ರಾಲಿ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.

ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 387 ರನ್ ಗಳಿಸಿ ಆಲೌಟ್ ಆಗಿತ್ತು. ಮೂರನೇ ದಿನದಾಟ ಮುಗಿಯುವ ಸ್ವಲ್ಪ ಹೊತ್ತಿಗೂ ಮುನ್ನ ಭಾರತ ಕೂಡ ಅಷ್ಟೇ ರನ್ ಗಳಿಸಿ ಸರ್ವಪತನ ಕಂಡಿತ್ತು. ಆರು ನಿಮಿಷಗಳ ಆಟ ಬಾಕಿ ಇತ್ತು. ಹೀಗಾಗಿ, ಭಾರತ ತಂಡ ಎರಡು ಓವರ್ ಬೌಲಿಂಗ್ ಮಾಡಲು ಬಯಸಿತ್ತು. ಅದಕ್ಕೆ ಅವಕಾಶ ನೀಡದಂತೆ ಆಂಗ್ಲ ಪಡೆಯ ಆರಂಭಿಕರು ಕಾಲಹರಣಕ್ಕೆ ಮುಂದಾಗಿದ್ದರು. ಇದು, ಟೀಂ ಇಂಡಿಯಾ ನಾಯಕನನ್ನು ಕೆರಳಿಸಿತ್ತು.

ಇದೇ ವಿಚಾರವಾಗಿ ನಾಲ್ಕನೇ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಗಿಲ್, ಆತಿಥೇಯ ತಂಡ ಕಾಲಹರಣ ತಂತ್ರ ಅನುಸರಿಸಿ ಕ್ರೀಡಾ ಸ್ಫೂರ್ತಿ ಕಡೆಗಣಿಸಿತು ಎಂದು ಟೀಕಿಸಿದ್ದರು.

ಐಪಿಎಲ್ನಲ್ಲಿ ಗಿಲ್ ನಾಯಕತ್ವದ 'ಗುಜರಾತ್ ಟೈಟನ್ಸ್' ತಂಡದ ಸಹಾಯಕ ಕೋಚ್ ಆಗಿರುವ ಪಾರ್ಥಿವ್ ಅವರು, ಟೀಂ ಇಂಡಿಯಾ ನಾಯಕನ ಆಕ್ರಮಣಕಾರಿ ಧೋರಣೆಯು ಅಚ್ಚರಿ ಮೂಡಿಸಿದೆಯೇ ಎಂಬ ಪ್ರಶ್ನೆಗೆ ಜಿಯೊ ಹಾಟ್ಸ್ಟಾರ್ ಚರ್ಚೆ ವೇಳೆ ಪ್ರತಿಕ್ರಿಯಿಸಿದ್ದಾರೆ.

'ಹಾಗೇನಿಲ್ಲ. ಐಪಿಎಲ್ ವೇಳೆಯೂ ಅವರು (ಗಿಲ್) ಹಾಗೆ ವರ್ತಿಸಿರುವುದನ್ನು ನೋಡಿದ್ದೇವೆ. ಅವರು ಮಿತಿ ಮೀರದಂತೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ಬ್ಯಾಟರ್ಗಳು ಎಷ್ಟು ನಿಧಾನವಾಗಿ ಕ್ರೀಸ್ಗೆ ಬಂದರು ಎಂಬುದು ಸ್ಪಷ್ಟವಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳು ಕ್ರೀಡಾ ಸ್ಫೂರ್ತಿ ಎಂಬುದನ್ನು ಅನುಕೂಲಕ್ಕ ತಕ್ಕಂತೆ ಬಳಸುತ್ತವೆ' ಎಂದು ಹೇಳಿದ್ದಾರೆ.

'ಬ್ಯಾಟರ್ 90 ಸೆಕೆಂಡ್ ತಡವಾಗಿ ಕ್ರೀಸ್ಗೆ ಬಂದರೆ ಪರವಾಗಿಲ್ಲವೇ ಎಂದು ಗಿಲ್, ಆಂಗ್ಲ ಮಾಧ್ಯಮಗಳನ್ನು ಪ್ರಶ್ನಿಸಿರುವುದು ತಪ್ಪಲ್ಲ. ಅದು (ಕಾಲಹರಣ) ಉದ್ದೇಶಪೂರ್ವಕವೇ ಆಗಿತ್ತು. ಶುಭಮನ್ ತಪ್ಪು ಮಾಡಿದ್ದಾರೆ ಎಂದು ನನಗೆ ಅನಿಸಿಲ್ಲ. ತಂಡದ ಯೋಜನೆಗಳನ್ನು ಕಾರ್ಯಗತಗೊಳಿಸುವ ವಿಚಾರದಲ್ಲಿ ಅವರು ಸ್ಪಷ್ಟತೆ ಹೊಂದಿದ್ದಾರೆ' ಎನ್ನುವ ಮೂಲಕ ಗಿಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
.IND vs ENG 4th Test: ಗಾಯದ ನಡುವೆಯೂ ವಿಶಿಷ್ಟ ದಾಖಲೆ ಬರೆದ ಪಂತ್ .IND vs ENG Test | ಕಾಲ್ಬೆರಳು ಮುರಿತ: ಇಂಗ್ಲೆಂಡ್ ಸರಣಿಯಿಂದ ಹೊರಬಿದ್ದ ಪಂತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.