ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ind v SA ODI | ಮೈದಾನದಲ್ಲಿ ತೇವ: 'ಫೈನಲ್' ಪಂದ್ಯಕ್ಕೆ ಟಾಸ್ ವಿಳಂಬ

Last Updated 11 ಅಕ್ಟೋಬರ್ 2022, 7:54 IST
ಅಕ್ಷರ ಗಾತ್ರ

ನವದೆಹಲಿ:ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಹಾಗೂದಕ್ಷಿಣ ಆಫ್ರಿಕಾ ನಡುವಣ ಮೂರು ಪಂದ್ಯಗಳಏಕದಿನ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯಕ್ಕೆ ಮಳೆಯಿಂದಾಗಿ ಅಡ್ಡಿಯಾಗಿದೆ. ಮಧ್ಯಾಹ್ನ 1ಕ್ಕೆ ಟಾಸ್‌ ನಿರ್ಧಾರವಾಗಬೇಕಿತ್ತು. ಆದರೆ, ಮೈದಾನದಲ್ಲಿ ತೇವ ಇರುವ ಕಾರಣ 30 ನಿಮಿಷವಿಳಂಬವಾಗಲಿದೆ.

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ. ಹೀಗಾಗಿ ಇಂದಿನ (ಮಂಗಳವಾರದ) ಪಂದ್ಯವು ಸರಣಿ ಜಯವನ್ನು ನಿರ್ಧರಿಸಲಿದೆ.

ಶಿಖರ್‌ ಧವನ್‌ ನೇತೃತ್ವದ ಭಾರತದ ಬ್ಯಾಟಿಂಗ್‌ಗೆಇಶಾನ್‌ ಕಿಶನ್‌, ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದಾರೆ. ಆದರೆ, ಬೌಲಿಂಗ್‌ ವಿಭಾಗ ಮತ್ತಷ್ಟು ಸುಧಾರಿಸಬೇಕಿದೆ

ಡೇವಿಡ್ ಮಿಲ್ಲರ್, ಏಡನ್‌ ಮರ್ಕರಂ ಹಾಗೂ ಹೆನ್ರಿಚ್ ಕ್ಲಾಸನ್ ಪ್ರವಾಸಿ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ.ಕಗಿಸೊ ರಬಾಡ, ಲುಂಗಿ ಗಿಡಿ ಹಾಗೂ ವೇಯ್ನ್ ಪಾರ್ನೆಲ್ ಬೌಲಿಂಗ್‌ನಲ್ಲಿ ಮಿಂಚುತ್ತಿರುವುದರಿಂದಾಗಿ ತಂಡವು ಸಮತೋಲನಗೊಂಡಿದೆ.

ಭಾರತ ತಂಡ:ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಆವೇಶ್ ಖಾನ್, ಮೊಹಮ್ಮದ್ ಸಿರಾಜ್

ದಕ್ಷಿಣ ಆಫ್ರಿಕಾತಂಡ: ತೆಂಬಾ ಬವುಮಾ (ನಾಯಕ), ಜೆನ್ಮನ್ ಮಲಾನ್, ಕ್ವಿಂಟನ್ ಡಿಕಾಕ್, ರೀಜಾ ಹೆನ್ರಿಕ್ಸ್, ಏಡನ್ ಮರ್ಕರಂ, ಹೆನ್ರಿಚ್ ಕ್ಲಾಸನ್, ಡೇವಿಡ್ ಮಿಲ್ಲರ್, ವೇನ್ ಪಾರ್ನೆಲ್, ಕಗಿಸೊ ರಬಾಡ, ಹೆನ್ರಿಚ್ ನಾಕಿಯಾ, ಕೇಶವ್ ಮಹಾರಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT