ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA| ಭಾರತ – ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಳೆಯಿಂದ ರದ್ದು: ಸರಣಿ ಸಮಬಲ

Last Updated 19 ಜೂನ್ 2022, 17:17 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಸೇರಿದ್ದ ಕ್ರಿಕೆಟ್‌ಪ್ರೇಮಿಗಳು ಮುಂಗಾರು ಮಳೆಯ ಚಿನ್ನಾಟ ವೀಕ್ಷಿಸಿದರು.

ಇದರಿಂದಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20ಪಂದ್ಯವೀಕ್ಷಿಸುವ ಅವರ ಆಸೆ ಮಾತ್ರ ಈಡೇರಲಿಲ್ಲ. ಅಲ್ಲದೇ ಸರಣಿ ಗೆಲುವಿನ ಸಂಭ್ರಮ ಆಚರಿಸುವ ಅವಕಾಶ ಉಭಯ ತಂಡಗಳಿಗೂ
ಸಿಗಲಿಲ್ಲ!

ಹೌದು; ಐದು ಪಂದ್ಯಗಳ ಸರಣಿಯು 2–2ರಿಂದ ಸಮಬಲಗೊಂಡಿತು. ಭಾರತದ ಆತಿಥ್ಯದಲ್ಲಿ ಕಳೆದ ಏಳು ವರ್ಷಗಳಲ್ಲಿ ನಡೆದ ಮೂರು ಸರಣಿಗಳಲ್ಲಿಯೂ ದಕ್ಷಿಣ ಆಫ್ರಿಕಾ ಸೋತಿಲ್ಲ. 2015ರಲ್ಲಿ ದಕ್ಷಿಣ ಆಫ್ರಿಕಾ 2–0ಯಿಂದ ಗೆದ್ದಿತ್ತು. 2019ರ ಸರಣಿಯು 1–1ರಿಂದ ಸಮಬಲಗೊಂಡಿತ್ತು. ಇದೀಗ ಮತ್ತೊಮ್ಮೆ ಸಮಬಲವಾಯಿತು.

ಮೂರು ವರ್ಷಗಳ ನಂತರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಟಿ20ಪಂದ್ಯನಡೆಯಲು ವೇದಿಕೆ ಸಿದ್ಧವಾಗಿತ್ತು. ಪ್ರೇಕ್ಷಕರ ಗ್ಯಾಲರಿಗಳೂ ಸಂಪೂರ್ಣವಾಗಿ ಭರ್ತಿಯಾಗಿದ್ದವು. ಕಳೆದ ಒಂದು ವಾರದಿಂದ ಕಷ್ಟಪಟ್ಟು ಟಿಕೆಟ್‌ಗಳನ್ನು ಖರೀದಿಸಿಕೊಂಡು ಬಂದಿದ್ದ ಕ್ರಿಕೆಟ್‌ಪ್ರೇಮಿಗಳಿಗೆ ನೋಡಲು ಸಿಕ್ಕಿದ್ದು 21 ಎಸೆತಗಳ ಆಟ ಮಾತ್ರ.ಪಂದ್ಯರದ್ದಾದಾಗ ಭಾರತ ಎರಡು ವಿಕೆಟ್‌ಗೆ 28 ರನ್‌ ಗಳಿಸಿತ್ತು.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇನ್ನೇನು ಭಾರತದ ಆರಂಭಿಕ ಜೋಡಿ ಕಣಕ್ಕಿಳಿಯುವ ಕೆಲವೇ ಕ್ಷಣಗಳ ಮುನ್ನ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಆದರೆ, 20 ನಿಮಿಷಗಳಲ್ಲಿ ಸ್ಥಗಿತವಾಯಿತು.

ಇದರಿಂದಾಗಿ 7.50ಕ್ಕೆ ಮತ್ತೆಪಂದ್ಯಆರಂಭಿಸಲಾಯಿತು.

ಮೊದಲ ಓವರ್‌ನಲ್ಲಿಯೇ ಹಂಗಾಮಿ ನಾಯಕ ಕೇಶವ್ ಮಹಾರಾಜ್ ಅವರ ಎರಡು ಎಸೆತಗಳನ್ನು ಇಶಾನ್ ಕಿಶನ್ ಸಿಕ್ಸರ್‌ಗೆ ಎತ್ತಿದರು. ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿತು.

ಆದರೆ, ನಂತರದ ಓವರ್‌ನಲ್ಲಿ ಲುಂಗಿ ಗಿಡಿ ಎಸೆತದಲ್ಲಿ ಇಶಾನ್ ಬೌಲ್ಡ್ ಆದರು. ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ಋತುರಾಜ್ ಗಾಯಕವಾಡ್‌ ವಿಕೆಟ್‌ ಅನ್ನೂ ಲುಂಗಿ ಗಿಡಿ ಕಬಳಿಸಿದರು. ಮೂರನೇ ಎಸೆತವಾಗುವಾಗಲೇ ಸಣ್ಣಗೆ ಮಳೆ ಶುರುವಾಯಿತು.

8.10ರಿಂದ ಶುರುವಾದ ಮಳೆ 9.30ಯವರೆಗೂ ಮುಂದುವರಿಯಿತು. 9.35ಕ್ಕೆಪಂದ್ಯಸ್ಥಗಿತಗೊಳಿಸಲು ಮ್ಯಾಚ್‌ ರೆಫರಿ ಜಾವಗಲ್ ಶ್ರೀನಾಥ್, ಅಂಪೈರ್‌ಗಳಾದ ವೀರೇಂದ್ರ ಶರ್ಮಾ ಮತ್ತು ಅನಂತ್‌ ಪದ್ಮನಾಭನ್‌ ಅವರು ತೀರ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT