ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಶ್ರೀಲಂಕಾ ಎದುರಿನ ಏಕದಿನ ಸರಣಿ ಜಯದತ್ತ ಶಿಖರ್ ಬಳಗದ ಚಿತ್ತ

ಎರಡನೇ ಪಂದ್ಯ ಮಂಗಳವಾರ
Last Updated 19 ಜುಲೈ 2021, 14:54 IST
ಅಕ್ಷರ ಗಾತ್ರ

ಕೊಲಂಬೊ: ಯುವಪಡೆಯೇ ಹೆಚ್ಚಾಗಿರುವ ಭಾರತ ತಂಡಕ್ಕೆ ಸಾಮರ್ಥ್ಯ ಒರೆಗೆ ಹಚ್ಚಲು ಮತ್ತೊಂದು ಅವಕಾಶ ಬಂದೊದಗಿದೆ. ಮಂಗಳವಾರ ಇಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿಶಿಖರ್‌ ಧವನ್‌ ನಾಯಕತ್ವದ ಬಳಗವು ಶ್ರೀಲಂಕಾ ಸವಾಲಿಗೆ ಸಜ್ಜಾಗಿದೆ. ಸರಣಿ ಗೆಲುವಿಗಾಗಿ ಪ್ರಯತ್ನಿಸಲಿದೆ.

ಪೃಥ್ವಿ ಶಾ ಅವರ ಉತ್ತಮ ಆರಂಭ, ಧವನ್ ಮತ್ತುಇಶಾನ್ ಕಿಶನ್ ಅವರ ಅಮೋಘ ಅರ್ಧಶತಕದ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿಭಾನುವಾರ ಭಾರತ ಸುಲಭ ಗೆಲುವು ಸಾಧಿಸಿತ್ತು. ಶ್ರೀಲಂಕಾ ಏಳು ವಿಕೆಟ್‌ಗಳಿಂದ ಮಣಿದಿತ್ತು.

ಸೀಮಿತ ಓವರ್‌ಗಳ ಮಾದರಿಗಳಲ್ಲಿ ಭಾರತದ ಆಟಗಾರರು ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಬಯಸುತ್ತಾರೆ. ಇಶಾನ್‌, ಪೃಥ್ವಿ ಮತ್ತು ಸೂರ್ಯಕುಮಾರ್‌ ಬ್ಯಾಟಿಂಗ್ ಇದಕ್ಕೆ ಉದಾಹರಣೆಯಂತಿತ್ತು. ವೇಗಿ ಭುವನೇಶ್ವರ ಕುಮಾರ್ ಹೆಚ್ಚು ರನ್ ಬಿಟ್ಟುಕೊಟ್ಟಿರುವುದರಿಂದ ಲಯಕ್ಕೆ ಮರಳಬೇಕಾಗಿದೆ. ಸರಣಿ ಗೆಲ್ಲುವ ತವಕದಲ್ಲಿರುವ ಭಾರತ, ಎರಡನೇ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ.

ಶ್ರೀಲಂಕಾ ತಂಡವು ಈ ಹಣಾಹಣಿಯಲ್ಲಿ ತಿರುಗೇಟು ನೀಡಲು ಪ್ರಯತ್ನಿಸಲಿದೆ. ಮೊದಲ ಪಂದ್ಯದಲ್ಲಿ ದ್ವೀಪರಾಷ್ಟ್ರದ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಕಂಡರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಭಾರತಕ್ಕೆ ಪರೀಕ್ಷೆಯೊಡ್ಡಬೇಕಾದರೆ ಈ ವಿಭಾಗದಲ್ಲಿ ಅವರು ಸುಧಾರಿಸಬೇಕಿದೆ. ಬೌಲರ್‌ಗಳೂ ಕೊಡುಗೆ ನೀಡಬೇಕಿದೆ.

ತಂಡಗಳು
ಭಾರತ:
ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ತ ಪಡಿಕ್ಕಲ್, ಋತುರಾಜ್ ಗಾಯಕವಾಡ, ಸೂರ್ಯಕುಮಾರ್ ಯಾದವ್, ಮನೀಷ್ ಪಾಂಡೆ, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್‌ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಕೃಷ್ಣಪ್ಪ ಗೌತಮ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ರಾಹುಲ್ ಚಾಹರ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಚೇತನ್ ಸಕಾರಿಯಾ, ನವದೀಪ್ ಸೈನಿ.

ಶ್ರೀಲಂಕಾ: ದಸುನ್ ಶನಕಾ (ನಾಯಕ), ಧನಂಜಯ ಡಿಸಿಲ್ವಾ (ಉಪನಾಯಕ), ಅವಿಷ್ಕಾ ಫರ್ನಾಂಡೊ, ಭಾನುಕಾ ರಾಜಪಕ್ಸ, ಪಥುಮ್ ನಿಸಾಂಕ, ಚರಿತ್ ಅಸಲೆಂಕಾ, ವಾಣಿಂದು ಹಸರಂಗ, ಅಶೆನ್ ಭಂಡಾರ, ಮಿನೊದ ಭಾನುಕಾ, ಲಾಹಿರು ಉದಾರ, ರಮೇಶ್ ಮೆಂಡಿಸ್, ಚಮಿಕಾ ಕರುಣಾರತ್ನೆ, ದುಷ್ಮಂತ ಚಾಮೀರ, ಲಕ್ಷನ್ ಸಂದಕನ್, ಇಶಾನ್ ಜಯರತ್ನೆ, ಪ್ರವೀಣ ಜಯವಿಕ್ರಮ, ಅಸಿತಾ ಫರ್ನಾಂಡೊ, ಕಸುನ್ ರಜಿತಾ, ಲಾಹಿರು ಕುಮಾರ್, ಇಸುರು ಉಡಾನ.

ಪಂದ್ಯ ಆರಂಭ: ಮಧ್ಯಾಹ್ನ 3.00.
ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT