ಮುಂಬೈ: ಆತಿಥೇಯ ಭಾರತ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಬೃಹತ್ ಮೊತ್ತ ಕಲೆಹಾಕಿದೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪ್ರವಾಸಿ ಪಡೆ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 338 ರನ್ ಕಲೆಹಾಕಿದೆ. ಗುರಿ ಬೆನ್ನತ್ತುವ ವೇಳೆ ಆರಂಭಿಕ ಆಘಾತ ಅನುಭವಿಸಿರುವ ಭಾರತಕ್ಕೆ ಹ್ಯಾಟ್ರಿಕ್ ಸೋಲಿನ ಭೀತಿ ಎದುರಾಗಿದೆ.

ಮತ್ತೆ ಮಿಂಚಿದ ಲಿಚ್‌ಫೀಲ್ಡ್
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸಿಸ್‌ಗೆ ಫೊಯೆಬೆ ಲಿಚ್‌ಫೀಲ್ಡ್ ಹಾಗೂ ನಾಯಕಿ ಅಲಿಸ್ಸಾ ಹೀಲಿ ಅಮೋಘ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 189 ರನ್‌ಗಳ ಕಲೆಹಾಕಿತು.

ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದ ಫೊಯೆಬೆ ಈ ಬಾರಿ ಮೂರಂಕಿ ಮುಟ್ಟಿದರು. 125 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 119 ರನ್ ಚಚ್ಚಿದರು. ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇದು ಅವರಿಗೆ ಎರಡನೇ ಶತಕ.

ಫೊಯೆಬೆಗೆ ಉತ್ತಮ ಸಹಕಾರ ನೀಡಿದ ಹೀಲಿ 82 ರನ್ ಗಳಿಸಿ ಔಟಾಗಿ, ಸ್ವಲ್ಪದರಲ್ಲೇ ಶತಕ ತಪ್ಪಿಸಿಕೊಂಡರು.

ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಎಲಿಸ್ ಪೆರ್ರಿ (16), ಬೆತ್ ಮೂನಿ (3) ಮತ್ತು ತಹ್ಲಿಯಾ ಮೆಕ್‌ಗ್ರಾತ್ (0) ವೈಫಲ್ಯ ಅನುಭವಿಸಿದರು. ಆದರೆ, ಕೊನೆಯಲ್ಲಿ ಉಪಯುಕ್ತ ಆಟವಾಡಿದ ಆ್ಯಶ್ಲೇ ಗಾರ್ಡನರ್ (30), ಅನ್ನಾಬೆಲ್ ಸುಥರ್‌ಲ್ಯಾಂಡ್ (23) ಮತ್ತು ಅಲನಾ ಕಿಂಗ್ (ಅಜೇಯ 26) ತಂಡದ ಮೊತ್ತವನ್ನು 340ರ ಸನಿಹಕ್ಕೆ ಕೊಂಡೊಯ್ದರು.

ಕನ್ನಡತಿ ಶ್ರೇಯಾಂಕಾ ಪಾಟೀಲ್ ಮೂರು ವಿಕೆಟ್ ಉರುಳಿಸಿದರು. ಅಮನ್‌ಜೊತ್ ಕೌರ್ 2, ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್ ಪಡೆದರು.

ಭಾರತಕ್ಕೆ ಆರಂಭಿಕ ಆಘಾತ
ಬೃಹತ್ ಗುರಿ ಬೆನ್ನತ್ತಿರುವ ಭಾರತ 23 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 104 ರನ್ ಗಳಿಸಿದೆ. ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಯಸ್ತಿಕಾ ಭಾಟಿಯಾ (6), ಸ್ಮೃತಿ ಮಂದಾನ (29), ರಿಚಾ ಘೋಷ್ (19), ನಾಯಕಿ ಹರ್ಮನ್ ಪ್ರೀತ್ ಕೌರ್ (3), ಜೆಮಿಮಾ ರಾಡ್ರಿಗಸ್ (25) ಮತ್ತು ಅಮನ್‌ಜೊತ್ ಕೌರ್ (3) ಪೆವಿಲಿಯನ್ ಸೇರಿಕೊಂಡಿದ್ದಾರೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಸೋತಿದ್ದ ಆತಿಥೇಯರು, ಎರಡನೇ ಪಂದ್ಯದಲ್ಲಿ ಕೇವಲ ಮೂರು ರನ್‌ಗಳಿಂದ ಪರಾಭವಗೊಂಡಿದ್ದರು. ಹೀಗಾಗಿ ಈ ಪಂದ್ಯವನ್ನಾದರೂ ಗೆದ್ದು ಗೌರವ ಉಳಿಸಿಕೊಳ್ಳುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದಿದ್ದರು.

ಈ ಪಂದ್ಯ ಗೆಲ್ಲಬೇಕಾದರೆ, ಉಳಿದಿರುವ 4 ವಿಕೆಟ್ ಹಾಗೂ 27 ಓವರ್‌ಗಳಲ್ಲಿ 235 ರನ್ ಗಳಿಸಬೇಕಿದೆ. ಹೀಗಾಗಿ ಟೀಂ ಇಂಡಿಯಾಗೆ ಸರಣಿ ಕ್ಲೀನ್ ಸ್ವೀಪ್ ಭೀತಿ ಎದುರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.