ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡದ ಒಬ್ಬ ಆಟಗಾರನಿಗೆ ಕೋವಿಡ್

Last Updated 15 ಜುಲೈ 2021, 4:22 IST
ಅಕ್ಷರ ಗಾತ್ರ

ನವದೆಹಲಿ: ಇಂಗ್ಲೆಂಡ್ ಪ್ರವಾಸದಲ್ಲಿರುವ 23 ಭಾರತೀಯ ಕ್ರಿಕೆಟಿಗರಲ್ಲಿ ಒಬ್ಬರಿಗೆ 20 ದಿನಗಳ ವಿರಾಮದ ಸಮಯದಲ್ಲಿ ಕೋವಿಡ್ ಸೋಂಕು ತಗುಲಿದ್ದು, ಗುರುವಾರ ತಂಡದೊಂದಿಗೆ ಅವರು ಡರ್ಹ್ಯಾಮ್‌ಗೆತೆರಳುವುದಿಲ್ಲ ಎಂದು ಪಿಟಿಐ ವರದಿ ಮಾಡಿದೆ.

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಇಂಗ್ಲೆಂಡ್‌ನಲ್ಲಿರುವ ಭಾರತೀಯ ತಂಡಕ್ಕೆ ಇ-ಮೇಲ್ ಸಂದೇಶ ಕಳುಹಿಸಿದ ಬೆನ್ನಲ್ಲೇ ಸುದ್ದಿ ಹೊರ ಬಿದ್ದಿದೆ. ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲು ಭಾರತ ತಂಡ ಡರ್ಹ್ಯಾಮ್‌ನ ಬಯೋ-ಬಬಲ್‌ಗೆ ಸೇರಿಕೊಳ್ಳಬೇಕಿದೆ.

‘ಹೌದು, ಒಬ್ಬ ಆಟಗಾರನಿಗೆ ರೋಗಲಕ್ಷಣವಿಲ್ಲದಿದ್ದರೂ ಕೋವಿಡ್ ಪಾಸಿಟಿವ್ ಆಗಿದೆ. ಸದ್ಯ ಆ ಆಟಗಾರ ಕ್ವಾರಂಟೈನ್‌ನಲ್ಲಿದ್ದಾರೆ. ಗುರುವಾರ ಅವರು ತಂಡದೊಂದಿಗೆ ಡರ್ಹ್ಯಾಮ್‌ಗೆ ಪ್ರಯಾಣಿಸುವುದಿಲ್ಲ’ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ.

ಆಟಗಾರನ ಹೆಸರು ಬಾಯ್ಬಿಡದೆ ಬಿಸಿಸಿಐ ಮೌನವಹಿಸಿದೆ. ಇಂಗ್ಲೆಂಡ್‌ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರುವ ಡೆಲ್ಟಾ ರೂಪಾಂತರ ಸೋಂಕು ಆಟಗಾರನಿಗೆ ತಗುಲಿದೆ ಎಂದು ತಿಳಿದುಬಂದಿದೆ.

ಕೋವಿಶೀಲ್ಡ್ ಕೇವಲ ರಕ್ಷಣೆಯನ್ನು ಒದಗಿಸುತ್ತದೆ. ಆದರೆ ವೈರಸ್ ವಿರುದ್ಧ ಸಂಪೂರ್ಣ ಇಮ್ಯುನಿಟಿ ನೀಡುವುದಿಲ್ಲ ಎಂದು ಶಾ ತಮ್ಮ ಪತ್ರದಲ್ಲಿ ಆಟಗಾರರಿಗೆ ಎಚ್ಚರಿಕೆ ನೀಡಿದ್ದು, ಜನಸಂದಣಿ ಹೆಚ್ಚಿರುವ ಸ್ಥಳಗಳಿಗೆ ತೆರಳದಂತೆ ಸೂಚಿಸಿದ್ದರು.

ಇತ್ತೀಚೆಗೆ ಅಂತ್ಯಗೊಂಡ ವಿಂಬಲ್ಡನ್ ಮತ್ತು ಯುರೋ ಚಾಂಪಿಯನ್‌ಶಿಪ್‌ ಪಂದ್ಯಗಳ ವೀಕ್ಷಣೆಗೆ ತೆರಳದಂತೆ ಶಾ ಪತ್ರದಲ್ಲಿ ನಿರ್ದಿಷ್ಟವಾಗಿ ಹೇಳಿದ್ದರು.

ಆಗಸ್ಟ್ 4ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಯಲ್ಲಿ ಭಾರತವು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳನ್ನು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT