ಹರಭಜನ್–ತಾಹಿರ್ ಕೈಚಳಕ: ಚೆನ್ನೈ ಗೆಲುವಿಗೆ 109 ರನ್‌ ಗುರಿ ನೀಡಿದ ಕೆಕೆಆರ್‌

ಶನಿವಾರ, ಏಪ್ರಿಲ್ 20, 2019
27 °C

ಹರಭಜನ್–ತಾಹಿರ್ ಕೈಚಳಕ: ಚೆನ್ನೈ ಗೆಲುವಿಗೆ 109 ರನ್‌ ಗುರಿ ನೀಡಿದ ಕೆಕೆಆರ್‌

Published:
Updated:

ಚೆನ್ನೈ: ಹರಭಜನ್ ಸಿಂಗ್‌, ಇಮ್ರಾನ್ ತಾಹಿರ್ ಅವರ ಮಾರಕ ಸ್ಪಿನ್ ದಾಳಿಗೆ ತತ್ತರಿಸಿದ ಕೋಲ್ಕತ್ತ ನೈಟ್ ರೈಡರ್ಸ್‌ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 108 ರನ್‌ ಗಳಿಸಿದೆ.

ಕೆಕೆಆರ್‌ ವಿರುದ್ಧ ಟಾಸ್‌ ಗೆದ್ದ ಚೆನ್ನೈ, ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು. 

ಕೆಕೆಆರ್‌ ಪರ ಬ್ಯಾಟಿಂಗ್‌ ಆರಂಭಿಸಿದ ಕ್ರಿಸ್ ಲಿನ್‌ ರನ್‌ ಖಾತೆ ತೆರೆಯುವುದಕ್ಕೂ ಮುನ್ನವೇ ದೀಪಕ್ ಚಾಹರ್‌ ಎಸೆತ ಮೊದಲ ಓವರ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ನಂತರ 6 ರನ್‌ ಗಳಿಸಿದ್ದ ಸುನಿಲ್ ನಾರಾಯಣ್‌, ಹರಭಜನ್ ಸಿಂಗ್‌ಗೆ ವಿಕೆಟ್‌ ಒಪ್ಪಿಸಿದರು. 

ಬಳಿಕ ಕ್ರೀಸ್‌ಗೆ ಬಂದ ರಾಬಿನ್‌ ಉತ್ತಪ್ಪ (11), ನಿತೀಶ್‌ ರಾಣಾ (00), ದಿನೇಶ್‌ ಕಾರ್ತಿಕ್‌ (19), ಶುಭಮನ್‌ ಗೀಲ್‌ (9),  ಪೀಯೂಷ್ ಚಾವ್ಲಾ (8), ಕುಲದೀಪ್ ಯಾದವ್ (00), ಪ್ರಸಿದ್ಧ ಕೃಷ್ಣ(00), ಆ್ಯಂಡ್ರೆ ರಸೆಲ್ ಅಜೇಯ 50, ಹ್ಯಾರಿ ಗುರ್ನಿ ಅಜೇಯ 01* ರನ್‌ ಗಳಿಸಿದರು. 

ಚೆನ್ನೈ ಪರ: ದೀಪಕ್ ಚಾಹರ್‌ 3, ಹರಭಜನ್ ಸಿಂಗ್‌ 2, ಇಮ್ರಾನ್ ತಾಹಿರ್ 2, ರವೀಂದ್ರ ಜಡೇಜ 1 ವಿಕೆಟ್‌ ಪಡೆದರು. 

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಸಿಎಸ್‌ಕೆ 3 ವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 25 ರನ್‌ ಗಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !