ಅಬುಧಾಬಿ: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಬುಧವಾರ ತಮ್ಮ ತವರೂರಿನ ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದ್ದಾರೆ.

ಸತತ ಮೂರು ಸೋಲುಗಳ ನಂತರ ಮತ್ತೆ ಜಯದ ಹಾದಿಗೆ ಮರಳಿರುವ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಬಳಗವು ಆತ್ಮವಿಶ್ವಾಸದಲ್ಲಿದೆ. ತನ್ನ ನಾಲ್ಕನೇ ಪಂದ್ಯದಲ್ಲಿ ಚೆನ್ನೈ ತಂಡವು ಕಿಂಗ್ಸ್ ಇಲೆವನ್ ಪಂಜಾಬ್ ಎದುರು 10 ವಿಕೆಟ್‌ಗಳಿಂದ ಜಯಿಸಿತ್ತು. ತಂಡವು ಒಟ್ಟು ಐದು ಪಂದ್ಯಗಳನ್ನು ಆಡಿದೆ. ದಿನೇಶ್ ಕಾರ್ತಿಕ್ ಬಳಗವು ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಆಡಿ ಎರಡರಲ್ಲಿ ಗೆದ್ದು ಉಳಿದಿದ್ದರಲ್ಲಿ ಸೋತಿದೆ.

ಚೆನ್ನೈನ ಆರಂಭಿಕ ಜೋಡಿ ಶೇನ್ ವಾಟ್ಸನ್ ಮತ್ತು ಫಾಫ್ ಡುಪ್ಲೆಸಿ ಜೋಡಿಯು ಅಜೇಯ ಜೊತೆಯಾಟವಾಡಿ ತಂಡವನ್ನು ಜಯದ ದಡ ಸೇರಿಸಿತ್ತು. ಅವರಿಬ್ಬರೊಂದಿಗೆ ಅಂಬಟಿ ರಾಯುಡು, ರವೀಂದ್ರ ಜಡೇಜ, ಮಹೇಂದ್ರಸಿಂಗ್ ಧೋನಿ ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಕಾಣಿಕೆ ಕೊಡಬಲ್ಲರು. ಬೌಲರ್ ಸ್ಯಾಮ್ ಕರನ್ ಕೂಡ ಕೆಳಕ್ರಮಾಂಕದಲ್ಲಿ ಕೆಲವು ರನ್‌ಗಳ ಕಾಣಿಕೆ ನೀಡಬಲ್ಲರು. ಆದರೆ ಇವರೆಲ್ಲರೂ ಕೆಕೆಆರ್‌ನ ಪ್ಯಾಟ್ ಕಮಿನ್ಸ್ ಮುಂದಾಳತ್ವದ ಬೌಲಿಂಗ್ ಪಡೆಯನ್ನು ಎದುರಿಸಿ ನಿಲ್ಲಬೇಕು.

ಚೆನ್ನೈ ಬೌಲರ್‌ಗಳಾದ ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಸ್ಪಿನ್ನರ್ ಪೀಯೂಷ್ ಚಾವ್ಲಾ, ಜಡೇಜ ಮತ್ತು ಡ್ವೇನ್ ಬ್ರಾವೊ ಅವರಿಗೆ ಕೆಕೆಆರ್ ಬ್ಯಾಟಿಂಗ್ ಪಡೆ ಕಠಿಣ ಸವಾಲೊಡ್ಡುವುದು ಖಚಿತ. ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ನಿತೀಶ್ ರಾಣಾ, ಆ್ಯಂಡ್ರೆ ರಸೆಲ್, ದಿನೇಶ್, ಸುನಿಲ್ ನಾರಾಯಣ ಮತ್ತು ಏಯಾನ್ ಮಾರ್ಗನ್ ಅವರಿಗೆ ಕಡಿವಾಣ ಹಾಕುವುದು ಪ್ರಮುಖ ಸವಾಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.