ಗುರುವಾರ , ನವೆಂಬರ್ 26, 2020
21 °C

IPL-2020: ಬಲಿಷ್ಠ ಡೆಲ್ಲಿ–ಕೋಲ್ಕತ್ತ ಸೆಣಸಾಟ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಅಸ್ಥಿರತೆಯ ಆಟದಿಂದ ಪರದಾಡುತ್ತಿರುವ ಕೋಲ್ಕತ್ತ ನೈಟ್ ರೈಡರ್ಸ್‌ ಶನಿವಾರ ಮುಖಾಮುಖಿಯಾಗಲಿವೆ.

ಸತತ ಎರಡು ಶತಕ ಹೊಡೆದ ದಾಖಲೆ ಮಾಡಿರುವ ಶಿಖರ್ ಧವನ್, ಶ್ರೇಯಸ್ ಅಯ್ಯರ್, ಶಿಮ್ರೊನ್ ಹೆಟ್ಮೆಯರ್, ಮಾರ್ಕಸ್ ಸ್ಟೊಯಿನಿಸ್ ಉತ್ತಮ ಲಯದಲ್ಲಿರುವ ಡೆಲ್ಲಿ ಬ್ಯಾಟ್ಸ್‌ಮನ್‌ಗಳು. ಕಗಿಸೊ ರಬಾಡ,  ಆರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ತಮ್ಮ ತಂಡವನ್ನು ಗೆಲುವಿನೆಡೆಗೆ ತೆಗೆದುಕೊಂಡು ಹೋಗುವಂತಹ ಬೌಲರ್‌ಗಳು. ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿ ಆಡುತ್ತಿರುವ ಈ ತಂಡದ ಎದುರು ಕೋಲ್ಕತ್ತ ಗೆಲುವು ಸಾಧಿಸಲು ಬಹಳಷ್ಟು ಶ್ರಮಪಡುವ ಅಗತ್ಯವಿದೆ.

ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಹೀನಾಯ ಸೋಲು ಅನುಭವಿಸಿತ್ತು ಕೆಕೆಆರ್.  ನೂರು ರನ್‌ಗಳ ಮೊತ್ತವನ್ನೂ ಪೇರಿಸಿರಲಿಲ್ಲ. ಇದೀಗ ಆ ಕಹಿಯನ್ನು ಮರೆತು ಗೆಲುವಿನತ್ತ ಚಿತ್ತ ನೆಡುವ ಸವಾಲು ತಂಡದ ಮುಂದಿದೆ. ಟೂರ್ನಿಯ ಮಧ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿಕೊಂಡ ತಂಡಕ್ಕೆ ಪ್ಲೇ ಆಫ್ ಹಾದಿ ಸುಲಭವಲ್ಲ.  ಆದ್ದರಿಂದ ಡೆಲ್ಲಿ ಎದುರಿನ ಪಂದ್ಯದಲ್ಲಿ ಜಯಿಸುವುದು ಮಹತ್ವದ್ದಾಗಿದೆ. 

ಪಂದ್ಯ ಆರಂಭ: ಸಂಜೆ 3.30, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು