ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಸೆ ಮರೆತು ಮುನ್ನುಗ್ಗುವ ಸಮಯ: ವಿರಾಟ್‌

Last Updated 8 ಸೆಪ್ಟೆಂಬರ್ 2020, 1:33 IST
ಅಕ್ಷರ ಗಾತ್ರ

ದುಬೈ : ಹಿಂದೆ ಅನುಭವಿಸಿದ ನಿರಾಸೆಗಳನ್ನು ಮರೆತು ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ‘ಶಾಂತ ಮನಸ್ಥಿತಿ‘ಯೊಂದಿಗೆ ತಂಡವನ್ನು ಮುನ್ನಡೆಸುವುದಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ, ಎಬಿ ಡಿವಿಲಿಯರ್ಸ್‌ರಂತಹ ಚಾಂಪಿಯನ್‌ ಆಟಗಾರರಿದ್ದರೂ ಕಳೆದ ಮೂರು ಐಪಿಎಲ್‌ ಆವೃತ್ತಿಗಳಲ್ಲಿ ತಂಡಕ್ಕೆ ಪ್ಲೇ ಆಫ್‌ ಪ್ರವೇಶಿಸಲು ಸಾಧ್ಯವಾಗಿಲ್ಲ. ಆರ್‌ಸಿಬಿ ಕೊನೆಯ ಬಾರಿ ಫೈನಲ್‌ ತಲುಪಿದ್ದು2016ರಲ್ಲಿ. ಆ ಋತುವಿನಲ್ಲಿ ಕೊಹ್ಲಿ ಅವರ ಬ್ಯಾಟ್‌ನಿಂದ ನಾಲ್ಕು ಅಮೋಘ ಶತಕಗಳು ಮೂಡಿಬಂದಿದ್ದವು.

‘2016ರ ಐಪಿಎಲ್‌ನಲ್ಲಿ ಆಡಿದ್ದ ರೀತಿಯ ನಮಗೆ ಹೆಮ್ಮೆಯಿದೆ. ಆಗಿದ್ದ ತಂಡ ಹೊರತುಪಡಿಸಿದರೆ ಈಗ ಇರುವ ತಂಡ ಅತ್ಯಂತ ಸಮತೋಲಿತವಾಗಿದೆ‘ ಎಂದು ಆರ್‌ಸಿಬಿಯ ಯೂಟ್ಯೂಬ್‌ ಕಾರ್ಯಕ್ರಮ ಬೋಲ್ಡ್ ಡೈರೀಸ್‌ನಲ್ಲಿ ವಿರಾಟ್‌ ಹೇಳಿದ್ದಾರೆ.

ಈ ಬಾರಿಯ ಟೂರ್ನಿಯು ಯುನೈಟೆಡ್‌ ಅರಬ್‌‌ ಎಮಿರೇಟ್ಸ್‌ನಲ್ಲಿ ಸೆಪ್ಟೆಂಬರ್‌ 19ರಿಂದ ನಿಗದಿಯಾಗಿದೆ.

‘ಈ ಹಿಂದಿನ ಯಾವ ಆವೃತ್ತಿಯಲ್ಲೂ ನನಗೆ ಇಷ್ಟು ನಿರಾಳ ಭಾವದ ಅನುಭವವಾಗಿರಲಿಲ್ಲ. ಎಬಿಡಿ ಬೇರೊಂದು ತಾಣದಿಂದ ಬರುತ್ತಿದ್ದಾರೆ. ಈಗಅವರು ಹೆಚ್ಚು ಫಿಟ್‌ ಆಗಿದ್ದಾರೆ. ಈ ಬಾರಿಯ ಐಪಿಎಲ್‌ಗೂ ಮುನ್ನ ನನ್ನ ಮನಸ್ಥಿತಿ ಸಮತೋಲನದಲ್ಲಿದೆ‘ ಎಂದು ವಿರಾಟ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT