ಮಂಗಳವಾರ, ಅಕ್ಟೋಬರ್ 26, 2021
23 °C

IPL 2021: ನನ್ನ ಗೆಳತಿಯ ಅವಹೇಳನ ಮಾಡಬೇಡಿ: ಡ್ಯಾನ್ ಕ್ರಿಸ್ಟಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರ್ಜಾ: ‘ಪಂದ್ಯದಲ್ಲಿ ನಾನು ಚೆನ್ನಾಗಿ ಆಡಲು ಸಾಧ್ಯವಾಗಿಲ್ಲವೆಂಬುದು ನಿಜ. ಇದು ಕ್ರೀಡೆಯಲ್ಲಿ ಸಹಜ. ಅದಕ್ಕೂ ಆಕೆಗೂ ಸಂಬಂಧವಿಲ್ಲ. ನನ್ನ ಗೆಳತಿಯನ್ನು ಅವಹೇಳನ ಮಾಡಬೇಡಿ’– ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಡ್ಯಾನ್ ಕ್ರಿಸ್ಟಿಯನ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದಿರುವ ಮನವಿ ಇದು.

ಸೋಮವಾರ ರಾತ್ರಿ ಆರ್‌ಸಿಬಿಯು ಎಲಿಮಿನೇಟರ್ ಪಂದ್ಯದಲ್ಲಿ ಸೋತಿತ್ತು. ಪಂದ್ಯದಲ್ಲಿ ಡ್ಯಾನ್ 1.4 ಓವರ್‌ ಬೌಲಿಂಗ್ ಮಾಡಿ 29 ರನ್‌ಗಳನ್ನು ಕೊಟ್ಟಿದ್ದರು. ವಿಕೆಟ್ ಗಳಿಸಿರಲಿಲ್ಲ. ಬ್ಯಾಟಿಂಗ್‌ನಲ್ಲಿಯೂ ಕೇವಲ ಒಂಬತ್ತು ರನ್ ಗಳಿಸಿದ್ದರು.  ಅದಕ್ಕಾಗಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.  

ಅಲ್ಲದೇ ಅವರ ಬಾಳಗೆಳತಿ  ಜಾರ್ಜಿಯಾ ಡನ್ (ಗರ್ಭಿಣಿಯಾಗಿದ್ದು ವಿಶ್ರಾಂತಿ ಯಲ್ಲಿದ್ದಾರೆ) ಅವರನ್ನೂ ಹೀಯಾಳಿಸಿದ್ದಾರೆ.

‘ಜಾರ್ಜಿಯಾರ ಇನ್ಸ್ಟಾಗ್ರಾಮ್ ಖಾತೆಗೆ ಹೋಗಿ ನೋಡಿ. ಎಂತಹ ಕೆಟ್ಟ ಕಮೆಂಟ್‌ಗಳನ್ನು ಬರೆದಿದ್ದಾರೆ. ಪಂದ್ಯಕ್ಕೂ ಆಕೆಗೂ ಸಂಬಂಧವಿಲ್ಲ. ಅವರನ್ನು  ಎಳೆತರಬೇಡಿ’ ಎಂದು ಡ್ಯಾನ್ ಬರೆದಿದ್ದಾರೆ.

ಆರ್‌ಸಿಬಿಯ ಯಶಸ್ವಿ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರು ಕೂಡ ಅಪಾರ ಟೀಕೆಗೊಳಗಾಗಿದ್ದಾರೆ. 

ಇದರಿಂದ ಬೇಸರಗೊಂಡಿರುವ ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್, ‘ಆಟಗಾರರ ಬಗ್ಗೆ ಪ್ರೀತಿ ಮತ್ತು ವಿಶ್ವಾಸದಿಂದ ಹಾರೈಸಿರುವ ಎಲ್ಲ ನಿಜವಾದ ಅಭಿಮಾನಿಗಳಿಗೆ ನಾನು ಕೃತಜ್ಞ. ದುರದೃಷ್ಟವಶಾತ್ ಕೆಲವು ಭಯಾನಕ ಮಂದಿ ಸಾಮಾಜಿಕ ಜಾಲತಾಣಗಳನ್ನು ನರಕಸದೃಶ ತಾಣಗಳನ್ನಾಗಿ ಮಾಡಿದ್ದಾರೆ. ಅಂತಹ ಹೀನಾಯ ಟೀಕೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು