ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಐಪಿಎಲ್‌ನಲ್ಲಿ 50ನೇ ಫಿಫ್ಟಿ ಸೇರಿದಂತೆ ಹಲವು ದಾಖಲೆ ಬರೆದ ವಾರ್ನರ್

ಐಪಿಎಲ್‌ನಲ್ಲಿ ಅರ್ಧಶತಕಗಳ ಫಿಫ್ಟಿ ಬಾರಿಸಿದ ಮೊದಲ ಬ್ಯಾಟ್ಸ್‌ಮನ್
Last Updated 28 ಏಪ್ರಿಲ್ 2021, 16:01 IST
ಅಕ್ಷರ ಗಾತ್ರ

ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್, ಹಲವು ದಾಖಲೆಗಳನ್ನು ಬರೆದಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಡೇವಿಡ್ ವಾರ್ನರ್, ಐಪಿಎಲ್‌ನಲ್ಲಿ 50 ಅರ್ಧಶಕಗಳನ್ನು ಬಾರಿಸಿದ ಮೊತ್ತ ಮೊದಲ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಭಾಜನರಾದರು.

ಅಷ್ಟೇ ಯಾಕೆ ಆಕರ್ಷಕ ಸಿಕ್ಸರ್ ಬಾರಿಸಿದ ವಾರ್ನರ್, ಐಪಿಎಲ್‌ನಲ್ಲಿ 200 ಸಿಕ್ಸರ್‌ಗಳ ಸರದಾರ ಎಂದೆನಿಸಿದರು. ಈ ಮೂಲಕ ಕ್ರಿಸ್ ಗೇಲ್ ಸೇರಿದಂತೆ ಎಲೀಟ್ ಪಟ್ಟಿಗೆ ಸೇರ್ಪಡೆಯಾದರು.

ಇಲ್ಲಿಗೂ ವಾರ್ನರ್ ಸಾಧನೆ ನಿಲ್ಲಲಿಲ್ಲ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ 10 ಸಹಸ್ರ ರನ್‌ಗಳ ಮೈಲಿಗಲ್ಲು ತಲುಪಿದ್ದಾರೆ. ಈ ದಾಖಲೆ ಬರೆದ ವಿಶ್ವದ ನಾಲ್ಕನೇ ಹಾಗೂ ಆಸ್ಟ್ರೇಲಿಯಾದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

55 ಎಸೆತಗಳನ್ನು ಎದುರಿಸಿದ ವಾರ್ನರ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 57 ರನ್ ಗಳಿಸಿದರು.

ಡೇವಿಡ್ ವಾರ್ನರ್ ದಾಖಲೆಗಳ ಪಟ್ಟಿ ಇಂತಿದೆ:

ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿ:
1. ಡೇವಿಡ್ ವಾರ್ನರ್: 50
2. ಶಿಖರ್ ಧವನ್: 43
3. ವಿರಾಟ್ ಕೊಹ್ಲಿ: 40
4. ರೋಹಿತ್ ಶರ್ಮಾ: 40
5. ಎಬಿ ಡಿ ವಿಲಿಯರ್ಸ್: 40

ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಸರದಾರರು:
1. ಕ್ರಿಸ್ ಗೇಲ್: 354
2. ಎಬ ಡಿ ವಿಲಿಯರ್ಸ್: 245
3. ರೋಹಿತ್ ಶರ್ಮಾ: 222
4. ಮಹೇಂದ್ರ ಸಿಂಗ್ ಧೋನಿ: 217
5. ವಿರಾಟ್ ಕೊಹ್ಲಿ: 204
6. ಕೀರಾನ್ ಪೊಲಾರ್ಡ್: 202
7. ಸುರೇಶ್ ರೈನಾ: 202
8. ಡೇವಿಡ್ ವಾರ್ನರ್: 201

ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸರದಾರರು:
1. ಕ್ರಿಸ್ ಗೇಲ್: 13,839
2. ಕೀರಾನ್ ಪೊಲಾರ್ಡ್: 10,694
3. ಶೋಯಬ್ ಮಲಿಕ್: 10,488
4. ಡೇವಿಡ್ ವಾರ್ನರ್: 10,000*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT