ಮಂಗಳವಾರ, ಅಕ್ಟೋಬರ್ 19, 2021
23 °C

IPL 2021: DC vs CSK: 'ಮಿಸ್ಟರ್ ಐಪಿಎಲ್' ರೈನಾಗಿಲ್ಲ ಅವಕಾಶ; ಅಭಿಮಾನಿಗಳ ಬೇಸರ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ದುಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪ್ಲೇ-ಆಫ್ ಪಂದ್ಯದಿಂದ 'ಮಿಸ್ಟರ್ ಐಪಿಎಲ್' ಖ್ಯಾತಿಯ ಸುರೇಶ್ ರೈನಾ ಅವರನ್ನು ಕೈಬಿಟ್ಟಿರುವುದು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 

ಟಾಸ್ ವೇಳೆ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ತಿಳಿಸಿದರು. ಕೆಲವೇ ಹೊತ್ತಿನಲ್ಲಿ ಟ್ವಿಟರ್‌ನಲ್ಲಿ 'No Raina' ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಲು ಶುರುವಾಯಿತು. 

ರೈನಾ ಅವರನ್ನು ಕೈಬಿಡಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಕಳಪೆ ಫಾರ್ಮ್ ಹಾಗೂ ಫಿಟ್ ಆಗಿಲ್ಲವೆಂಬ ಕಾರಣಕ್ಕೆ ಲೀಗ್ ಹಂತದ ಕೊನೆಯ ಕೆಲವು ಪಂದ್ಯಗಳಲ್ಲಿ ಆಡಿರಲಿಲ್ಲ. ಈಗ ಮೊದಲ ಕ್ವಾಲಿಫೈಯರ್‌ನಲ್ಲೂ ಆಯ್ಕೆಗೆ ಪರಿಗಣಿಸಲಾಗಲಿಲ್ಲ. 

ಅಂದ ಹಾಗೆ ಚೆನ್ನೈ ಇದೇ ಮೊದಲ ಬಾರಿಗೆ, ರೈನಾ ಇಲ್ಲದೆಯೇ ಪ್ಲೇ-ಆಫ್‌ನಲ್ಲಿ ಕಣಕ್ಕಿಳಿದಿದೆ. ರೈನಾ ಸ್ಥಾನವನ್ನು ರಾಬಿನ್ ಉತ್ತಪ್ಪ ತುಂಬಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು