ಮಂಗಳವಾರ, ಮೇ 18, 2021
30 °C

IPL 2021: ರಸೆಲ್ ಪವರ್; 12 ಎಸೆತಗಳಲ್ಲೇ 5 ವಿಕೆಟ್ ಪಡೆದು ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬೌಲರ್ ಆ್ಯಂಡ್ರೆ ರಸೆಲ್, ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ ಎರಡು ಓವರ್‌ಗಳಲ್ಲೇ ಐದು ವಿಕೆಟ್ ಪಡೆಯುವ ಮೂಲಕ ನೂತನ ದಾಖಲೆ ಬರೆದಿದ್ದಾರೆ. 

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಆ್ಯಂಡ್ರೆ ರೆಸೆಲ್ ಎಸೆದಿದ್ದು ಬರಿ 12 ಎಸೆತ. ಅಷ್ಟೊರೊಳಗೆ 15 ರನ್ ತೆತ್ತು ಐದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರಸೆಲ್ ದಾಖಲೆ ಪುಟ ಸೇರಿದ್ದಾರೆ. ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ದಾಳಿಗಿಳಿದ ರಸೆಲ್ ಮುಂಬೈ ಓಟಕ್ಕೆ ಕಡಿವಾಣ ಹಾಕಿದರು. 

ಕೀರಾನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಮಾರ್ಕೊ ಜಾನ್ಸನ್ ಮತ್ತು ರಾಹುಲ್ ಚಹರ್ ಅವರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು. 

ಇದು ಐಪಿಎಲ್ ಇತಿಹಾಸದಲ್ಲಿ ಕೆಕೆಆರ್ ಬೌಲರ್‌ನ ಶ್ರೇಷ್ಠ ಸಾಧನೆಯಾಗಿದೆ. ಕೆಕೆಆರ್ ಪರ ಸುನಿಲ್ ನರೇನ್, 2012ರಲ್ಲಿ 19 ರನ್ ನೀಡಿ ಐದು ವಿಕೆಟ್ ಪಡೆದಿರುವುದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು. 

ಹಾಗೆಯೇ ಮುಂಬೈ ಇಂಡಿಯನ್ಸ್ ವಿರುದ್ಧ ಎದುರಾಳಿ ತಂಡದ ಬೌಲರ್‌ನ ಶ್ರೇಷ್ಠ ಸಾಧನೆಯು ಆಗಿದೆ. ಕಳೆದ ಪಂದ್ಯದಲ್ಲಷ್ಟೇ ಆರ್‌ಸಿಬಿ ತಂಡದ ಹರ್ಷಲ್ ಪಟೇಲ್ 27 ರನ್ ತೆತ್ತು ಐದು ವಿಕೆಟ್ ಪಡೆದಿದ್ದರು. ಈ ದಾಖಲೆಯನ್ನೀಗ ರಸೆಲ್ ಮುರಿದಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು