ಶನಿವಾರ, ಅಕ್ಟೋಬರ್ 23, 2021
21 °C

IPL 2021: ಕನ್ನಡಿಗ ಪ್ರಸಿದ್ಧ ಕೃಷ್ಣ ಹಾಗೂ ಕೀರನ್ ಪೊಲಾರ್ಡ್ ನಡುವೆ ಜಟಾಪಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತ ನೈಟ್ ರೈಡರ್ಸ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ನಡುವೆ ಮುಂಬೈ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್ ಹಾಗೂ ಕೆಕೆಆರ್ ವೇಗದ ಬೌಲರ್, ಕನ್ನಡಿಗ ಪ್ರಸಿದ್ಧ ಕೃಷ್ಣ ನಡುವೆ ಬಿಸಿ ಬಿಸಿ ವಾತಾವರಣ ಸೃಷ್ಟಿಯಾಗಿತ್ತು. 

ಇದನ್ನೂ ಓದಿ: 

ಆಗಲೇ ಸೂರ್ಯ ಕುಮಾರ್ ಯಾದವ್ (5) ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ (55) ವಿಕೆಟ್‌ಗಳನ್ನು ಕಬಳಿಸಿರುವ ಪ್ರಸಿದ್ಧ ಕೃಷ್ಣ, ತಮ್ಮ ನಿಖರ ದಾಳಿಯಿಂದ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸಿದರು. 

ಪ್ರಸಿದ್ಧ ಕೃಷ್ಣ ಎಸೆದ ಇನ್ನಿಂಗ್ಸ್‌ನ 15ನೇ ಓವರ್ ವೇಳೆ ಘಟನೆ ನಡೆದಿತ್ತು. ಓವರ್‌ನ ಅಂತಿಮ ಎಸೆತದಲ್ಲಿ ಪೊಲಾರ್ಡ್ ಹೊಡೆಯಲು ಯತ್ನಿಸಿದ ಚೆಂಡು ನೇರವಾಗಿ ಬೌಲರ್ ಪ್ರಸಿದ್ಧ ಕೃಷ್ಣ ಬಳಿ ತೆರಳಿತ್ತು. ಈ ವೇಳೆ ಚೆಂಡನ್ನು ಹಿಡಿಯಲು ವಿಫಲರಾದರೂ ಮರಳಿ ಪೊಲಾರ್ಡ್ ಕಡೆಗೆ ಎಸೆಯುವ ರೀತಿಯಲ್ಲಿ ಕೈಸನ್ನೆ ಮಾಡಿದರು.  

ಇದು ಪೊಲಾರ್ಡ್ ಕೋಪಕ್ಕೆ ಕಾರಣವಾಯಿತು. ತಕ್ಷಣವೇ ಪ್ರಸಿದ್ಧ ಅವರನ್ನು ದಿಟ್ಟಿಸಿ ನೋಡಲಾರಂಭಿಸಿದರು. ಪ್ರಸಿದ್ಧ ಕೂಡ ಅಲ್ಲೇ ನಿಂತು ಕ್ಯಾಪ್ ಧರಿಸುತ್ತಾ ಪೊಲಾರ್ಡ್‌ಗೆ ತಕ್ಕ ಉತ್ತರ ನೀಡಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.  
 
ಅಂತಿಮವಾಗಿ ಪೊಲಾರ್ಡ್ 21 ರನ್ ಗಳಿಸಿ ರನೌಟ್ ಆದರು. ಅತ್ತ ಪ್ರಸಿದ್ಧ ನಾಲ್ಕು ಓವರ್‌ಗಳಲ್ಲಿ 43 ರನ್ ತೆತ್ತು ಎರಡು ವಿಕೆಟ್ ಕಬಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು