ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಇಂಗ್ಲೆಂಡ್ ಟೆಸ್ಟ್ ಸರಣಿಯಂತೆ ಐಪಿಎಲ್ ರದ್ದಾಗಬಹುದೇ? ವಾನ್ ವ್ಯಂಗ್ಯ

Last Updated 22 ಸೆಪ್ಟೆಂಬರ್ 2021, 14:41 IST
ಅಕ್ಷರ ಗಾತ್ರ

ದುಬೈ: ಯುಎಇನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ತಂಗರಸು ನಟರಾಜ್ ಅವರಿಗೆ ಕೋವಿಡ್ ಸೋಂಕು ತಗುಲಿದೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ಸರಣಿಯ ವೇಳೆಯಲ್ಲಿ ಕೋವಿಡ್ ಆಂತಕದಿಂದಾಗಿ ಅಂತಿಮ ಟೆಸ್ಟ್ ಪಂದ್ಯದಿಂದ ಭಾರತ ತಂಡವು ಹಿಂಜರಿದಿತ್ತು.

ಇದನ್ನೇ ಉಲ್ಲೇಖ ಮಾಡಿರುವ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಕೊನೆಯ ಟೆಸ್ಟ್ ಪಂದ್ಯದಂತೆ ಐಪಿಎಲ್ ಕೂಡ ರದ್ದಾಗಬಹುದೇ ಕಾದು ನೋಡೋಣ ಎಂದುವ್ಯಂಗ್ಯವಾಡಿದ್ದಾರೆ.

ಅಲ್ಲದೆ ಖಂಡಿತವಾಗಿಯೂ ಕೋವಿಡ್‌ನಿಂದಾಗಿ ಐಪಿಎಲ್ ರದ್ದುಗೊಳ್ಳುವುದಿಲ್ಲ ಎಂದು ವಾನ್ ಹೇಳಿದ್ದಾರೆ.

ಇಂಗ್ಲೆಂಡ್ ಪ್ರವಾಸದ ವೇಳೆಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಅಂತಿಮ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 10ರಿಂದ 14ರ ವರೆಗೆ ನಿಗದಿಯಾಗಿತ್ತು. ಪಂದ್ಯ ಆರಂಭಕ್ಕೂ ಕೆಲವೇ ಗಂಟೆಗಳಿರುವಾಗ ಕೋವಿಡ್ ಆತಂಕದಿಂದಾಗಿ ಭಾರತ ತಂಡವು ಸರಣಿಯನ್ನು ಮೊಟಕುಗೊಳಿಸಿತ್ತು.

ಐಪಿಎಲ್‌ನಲ್ಲಿ ಆಡುವ ಸಲುವಾಗಿ ಸರಣಿಯಿಂದ ಭಾರತ ಹಿಂದೆ ಸರಿದಿದೆ ಎಂದು ಮೈಕಲ್ ವಾನ್ ಆರೋಪಿಸಿದ್ದರು. ಈಗ ಐಪಿಎಲ್‌ನಲ್ಲೂ ಕೋವಿಡ್ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಾನ್ ಟೀಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT