ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ನೆಟ್ಸ್‌ಗಿಳಿದು ಕಠಿಣ ಅಭ್ಯಾಸ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ಈಗಾಗಲೇ ಸಿಎಸ್‌ಕೆ ಫ್ರಾಂಚೈಸಿಯು ಪೂರ್ವ ತರಬೇತಿಯನ್ನು ಪ್ರಾರಂಭಿಸಿದೆ. ಇದರಂತೆ ಧೋನಿ ಸೇರಿದಂತೆ ಪ್ರಮುಖ ಆಟಗಾರರು ಅಭ್ಯಾಸದಲ್ಲಿ ನಿರತವಾಗಿದ್ದಾರೆ.

ಈ ವಿಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಅಭಿಮಾನಿಗಳಿಗಾಗಿ ಹಂಚಿಕೊಂಡಿದೆ. ಮತ್ತೆ ಪ್ಯಾಡ್ ಕಟ್ಟಿ ನೆಟ್ಸ್‌ಗಿಳಿದು ಹಳೆಯ ಶೈಲಿಯಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಧೋನಿ ಗಮನ ಸೆಳೆದರು.

ಅಭ್ಯಾಸದ ವೇಳೆಯಲ್ಲಿ ಎಂದಿನಂತೆ ಸುಲಭವಾಗಿ ಚೆಂಡನ್ನು ಎದುರಿಸುತ್ತಿರುವ ಧೋನಿ, ಇಷ್ಟು ಸಮಯದಿಂದ ಕ್ರಿಕೆಟ್‌ನಿಂದ ದೂರವಿದ್ದರು ಎಂಬಂತೆ ಭಾಸವಾಗುತ್ತಿರಲಿಲ್ಲ. ಎಲ್ಲ ರೀತಿಯ ಹೊಡೆತಗಳನ್ನು ಟೈಮ್ ಮಾಡುವಲ್ಲಿ ಧೋನಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:IPL 2021: ಈ ಬಾರಿಯ ಐಪಿಎಲ್ ವಿಶೇಷತೆಗಳ ಮಾಹಿತಿ ಇಲ್ಲಿದೆ

ಈ ಮೂಲಕ ತಮ್ಮಲ್ಲಿ ಇನ್ನು ಕ್ರಿಕೆಟ್ ಉಳಿದಿದೆ ಎಂಬ ಸ್ಪಷ್ಟ ಸಂದೇಶವನ್ನು ಎದುರಾಳಿಗಳಿಗೆ ರವಾನಿಸಿದ್ದಾರೆ. ಕಳೆದ ವರ್ಷ ಯುಎಇನಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಧೋನಿ ಬಳಗ ಏಳನೇ ಸ್ಥಾನಕ್ಕೆ ಕುಸಿದಿತ್ತು.

ಆ ವೇಳೆ ಐಪಿಎಲ್‌ಗೂ ನಿವೃತ್ತಿ ಸಲ್ಲಿಸುವೀರಾ ಎಂಬ ಪ್ರಶ್ನೆಗೆ ಧೋನಿ 'ಖಂಡಿತವಾಗಿಯೂ ಇಲ್ಲ' ಎಂದು ಉತ್ತರ ನೀಡಿದ್ದರು. ಇದರಂತೆ 2021ನೇ ಸಾಲಿನಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸುವ ತವಕದಲ್ಲಿದ್ದಾರೆ.

ಈ ಬಾರಿಯ ಐಪಿಎಲ್ ಏಪ್ರಿಲ್ 9ರಿಂದ ಆರಂಭವಾಗಿ ಮೇ 30ರ ವರೆಗೆ ನಡೆಯಲಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಏಪ್ರಿಲ್ 10ರಂದು ಮುಂಬೈನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸವಾಲನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.