ಗುರುವಾರ , ಮೇ 13, 2021
39 °C

IPL 2021: ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 40ನೇ ಅರ್ಧಶತಕ ಸಾಧನೆ ಮಾಡಿದ್ದಾರೆ. 

ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. 

ಇಲ್ಲಿ ಗಮನಾರ್ಹ ಅಂಶವೆಂದರೆ ಕಳೆದ ಪಂದ್ಯದಲ್ಲಷ್ಟೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಜೇಯ ಅರ್ಧಶತಕ ಬಾರಿಸಿದ್ದ ವಿರಾಟ್, ಐಪಿಎಲ್‌ನಲ್ಲಿ 40ನೇ ಬಾರಿಗೆ 50 ಸಾಧನೆ ಮಾಡಿದ್ದರು. 

ಈಗ ವಿರಾಟ್ ಬೆನ್ನತ್ತಿರುವ ಹಿಟ್‌ಮ್ಯಾನ್, ಶುಕ್ರವಾರದಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಾಧನೆ ಬರೆದರು.  

ಚೆನ್ನೈನ ಸವಾಲಿನ ಪಿಚ್‌ನಲ್ಲಿ ಆರಂಭದಲ್ಲಿ ನಿಧಾನಗತಿಯ ಇನ್ನಿಂಗ್ಸ್ ಕಟ್ಟಿದ ರೋಹಿತ್ ಬಳಿಕ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದರು. 52 ಎಸೆತಗಳನ್ನು ಎದುರಿಸಿದ ರೋಹಿತ್ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 63 ರನ್ ಗಳಿಸಿದರು. 

ವಿರಾಟ್ ಕೊಹ್ಲಿ 188 ಹಾಗೂ ರೋಹಿತ್ ಶರ್ಮಾ 200ನೇ ಇನ್ನಿಂಗ್ಸ್‌ಗಳಲ್ಲಿ 40 ಅರ್ಧಶತಕಗಳ ಮೈಲಿಗಲ್ಲು ತಲುಪಿದ್ದಾರೆ. 

ಅಂದ ಹಾಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿರುವ ದಾಖಲೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಹೆಸರಲ್ಲಿದೆ. ವಾರ್ನರ್ ಒಟ್ಟು 49 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಶಿಖರ್ ಧವನ್ ಹೆಸರಲ್ಲಿ 43 ಅರ್ಧಶತಕಗಳಿವೆ. 

ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಸರದಾರರು:
1. ಡೇವಿಡ್ ವಾರ್ನರ್ (49)
2. ಶಿಖರ್ ಧವನ್ (43)
3. ವಿರಾಟ್ ಕೊಹ್ಲಿ (40)
4. ರೋಹಿತ್ ಶರ್ಮಾ (40)
5. ಸುರೇಶ್ ರೈನಾ (39)
6. ಎಬಿ ಡಿ ವಿಲಿಯರ್ಸ್ (39)
7. ಗೌತಮ್ ಗಂಭೀರ್ (36) 
8. ಕ್ರಿಸ್ ಗೇಲ್ (31)
9. ಅಜಿಂಕ್ಯ ರಹಾನೆ (28)
10. ರಾಬಿನ್ ಉತ್ತಪ್ಪ (24)
11. ಎಂ.ಎಸ್. ಧೋನಿ (23)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು