ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 LIVE | RR vs SRH: ಬಟ್ಲರ್ ಸೆಂಚುರಿ ಬ್ಲಾಸ್ಟ್; ಸನ್‌ರೈಸರ್ಸ್ ಉಡೀಸ್
LIVE

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ನವದೆಹಲಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 55 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಐಪಿಎಲ್‌ನಲ್ಲಿ ಚೊಚ್ಚಲ ಶತಕ ಬಾರಿಸಿದ ಜೋಸ್ ಬಟ್ಲರ್, ರಾಜಸ್ಥಾನ್ ಗೆಲುವಿನ ರೂವಾರಿಯೆನಿಸಿದರು.
Last Updated 2 ಮೇ 2021, 14:12 IST
ಅಕ್ಷರ ಗಾತ್ರ
14:1102 May 2021

ವಾರ್ನರ್ ಕೈಬಿಟ್ಟಿದ್ದು ಸರಿಯೇ?

13:5502 May 2021

ರಾಜಸ್ಥಾನ್ ವಿಜಯೋತ್ಸವ

13:4602 May 2021

ರಾಜಸ್ಥಾನ್‌ಗೆ 55 ರನ್ ಅಂತರದ ಭರ್ಜರಿ ಗೆಲುವು

ಓಪನರ್ ಜೋಸ್ ಬಟ್ಲರ್ ಭರ್ಜರಿ ಶತಕದ (124) ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 55 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. 

ಈ ಮೂಲಕ ಸಂಜು ಸ್ಯಾಮ್ಸನ್ ಪಡೆ ಗೆಲುವಿನ ಹಾದಿಗೆ ಮರಳಿದೆ. ಅಲ್ಲದೆ ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಮೂರು ಗೆಲುವುಗಳೊಂದಿಗೆ ಒಟ್ಟು ಆರು ಅಂಕಗಳನ್ನು ಸಂಪಾದಿಸಿದೆ. 

ಅತ್ತ ನಾಯಕತ್ವ ಬದಲಾದರೂ ಹೈದರಾಬಾದ್ ಅದೃಷ್ಟ ಮಾತ್ರ ಬದಲಾಗಲಿಲ್ಲ. ಅಷ್ಟೇ ಪಂದ್ಯಗಳಲ್ಲಿ ಆರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ. 

ಬಟ್ಲರ್ ಹಾಗೂ ಸಂಜು 150 ರನ್‌ಗಳ ಅಮೋಘ ಜೊತೆಯಾಟದ ನೆರವಿನಿಂದ ರಾಜಸ್ಥಾನ್ 220 ರನ್‌ಗಳ ಬೃಹತ್ ಗುರಿ ಪೇರಿಸಿತ್ತು. ಬಳಿಕ ಗುರಿ ಬೆನ್ನತ್ತಿದ ಹೈದರಾಬಾದ್ ಯಾವ ಹಂತಲ್ಲೂ ಸವಾಲೊಡ್ಡಲಿಲ್ಲ. ಅಂತಿಮವಾಗಿ ಎಂಟು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು. 

ಹೈದರಾಬಾದ್‌ಗೆ ಓಪನರ್‌ಗಳಾದ ಜಾನಿ ಬೆಸ್ಟ್ ಹಾಗೂ ಮನೀಶ್ ಪಾಂಡೆ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 57 ರನ್ ಜೊತೆಯಾಟ ನೀಡಿದರು. ಆ ಈ ಜೋಡಿ ಬೇರ್ಪಟ್ಟ ಬೆನ್ನಲ್ಲೇ ಹಿನ್ನೆಡೆ ಅನುಭವಿಸಿತು. 

ನಾಯಕ ಕೇನ್ ವಿಲಿಯಮ್ಸನ್ (20) ಹಾಗೂ ವಿಜಯ್ ಶಂಕರ್ (8) ನಿರಾಸೆ ಮೂಡಿಸಿದರು. ಮೊಹಮ್ಮದ್ ನಬಿ ಕೂಡಾ ಪೆವಿಲಿಯನ್ ಸೇರುವುದರೊಂದಿಗೆ 127 ರನ್ನಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇಲ್ಲಿಂದ ಬಳಿಕವೂ ಚೇತರಿಸಿಕೊಳ್ಳಲಿಲ್ಲ. 

ಕೇದಾರ್ ಜಾಧವ್ (19), ಮೊಹಮ್ಮದ್ ನಬಿ (17), ಅಬ್ದುಲ್ ಸಮದ್ (10), ಭುವನೇಶ್ವರ್ ಕುಮಾರ್ (14*) ಸಂದೀಪ್ ಶರ್ಮಾ (8*) ಹಾಗೂ ರಶೀದ್ ಖಾನ್ (0) ರನ್ ಗಳಿಸಿದರು. ರಾಜಸ್ಥಾನ್ ಪರ ಮುಸ್ತಾಫಿಜುರ್ ರೆಹಮಾನ್ ಹಾಗೂ ಕ್ರಿಸ್ ಮೊರಿಸ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು. 

13:2302 May 2021

ಗೆಲುವಿನತ್ತ ರಾಜಸ್ಥಾನ್

13:1502 May 2021

ರಾಜಸ್ಥಾನ್ ಹಿಡಿತದಲ್ಲಿ ಪಂದ್ಯ

13:1102 May 2021

ರಾಜಸ್ಥಾನ್ ಬೌಲರ್‌ಗಳ ಮೇಲುಗೈ

ಬೃಹತ್ ಮೊತ್ತ ಬೆನ್ನತ್ತಿದ ಹೈದರಾಬಾದ್‌ಗೆ ಓಪನರ್‌ಗಳಾದ ಜಾನಿ ಬೆಸ್ಟ್ ಹಾಗೂ ಮನೀಶ್ ಪಾಂಡೆ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 57 ರನ್ ಜೊತೆಯಾಟ ನೀಡಿದರು. ಆ ಈ ಜೋಡಿ ಬೇರ್ಪಟ್ಟ ಬೆನ್ನಲ್ಲೇ ಹಿನ್ನೆಡೆ ಅನುಭವಿಸಿತು. 

ನಾಯಕ ಕೇನ್ ವಿಲಿಯಮ್ಸನ್ (20) ಹಾಗೂ ವಿಜಯ್ ಶಂಕರ್ (8) ನಿರಾಸೆ ಮೂಡಿಸಿದರು. ಪರಿಣಾಮ 105 ರನ್ನಿಗೆ ಐದು ವಿಕೆಟ್ ಪತನಗೊಂಡಿತ್ತು. 

13:0602 May 2021

ಮೊರಿಸ್ ಸಂಭ್ರಮ

13:0502 May 2021

ರಾಜಸ್ಥಾನ್ ತಿರುಗೇಟು

13:0302 May 2021

ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿರುವ ರಾಹುಲ್

12:3502 May 2021

ಬೆಸ್ಟೊ-ಪಾಂಡೆ ಫಿಫ್ಟಿ ಜೊತೆಯಾಟ