ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಹರಾಜಿನ ಬಳಿಕ ಆರ್‌ಸಿಬಿ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

Last Updated 19 ಫೆಬ್ರುವರಿ 2021, 4:24 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ಫೆಬ್ರುವರಿ 18ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಆಟಗಾರರನ್ನು ಖರೀದಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯು ಸಂಪೂರ್ಣ ತಾಜಾತನವನ್ನು ಪಡೆದಿದ್ದು, ಹೆಚ್ಚು ಬಲಿಷ್ಠವೆನಿಸಿದೆ.

ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡವು ಅತಿ ಹೆಚ್ಚು ₹15 ಕೋಟಿ ನೀಡಿ ನ್ಯೂಜಿಲೆಂಡ್‌‌ನ ಕೈಲ್ ಜೆಮಿಸನ್ ಅವರನ್ನು ಖರೀದಿಸಿದೆ. ಹಾಗೆಯೇ ₹14.25 ಕೋಟಿಗೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.

ಐಪಿಎಲ್ 2021 ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರರ ಪಟ್ಟಿ ಇಂತಿದೆ:
ಕೈಲ್ ಜೆಮಿಸನ್ (ಆಲ್‌ರೌಂಡರ್): ₹15 ಕೋಟಿ
ಗ್ಲೆನ್ ಮ್ಯಾಕ್ಸ್‌ವೆಲ್ (ಆಲ್‌ರೌಂಡರ್): ₹14.25 ಕೋಟಿ
ಡ್ಯಾನಿಯಲ್ ಕ್ರಿಸ್ಟಿಯನ್ (ಆಲ್‌ರೌಂಡರ್): ₹4.80 ಕೋಟಿ
ಸಚಿನ್ ಬೇಬಿ (ಬ್ಯಾಟ್ಸ್‌ಮನ್): ₹20 ಲಕ್ಷ
ರಜತ್ ಪಾಟೀದಾರ್ (ಬ್ಯಾಟ್ಸ್‌ಮನ್) : ₹20 ಲಕ್ಷ
ಮೊಹಮ್ಮದ್ ಅಜರುದ್ದೀನ್ (ವಿಕೆಟ್ ಕೀಪರ್): ₹20 ಲಕ್ಷ
ಸುಯಶ್ ಪ್ರಭುದೇಸಾಯಿ(ಆಲ್‌ರೌಂಡರ್): ₹20 ಲಕ್ಷ
ಕೆಎಸ್ ಭರತ್ (ವಿಕೆಟ್ ಕೀಪರ್): ₹20 ಲಕ್ಷ

ಇದನ್ನೂ ಓದಿ:

ಐಪಿಎಲ್ 2021: ಆರ್‌ಸಿಬಿ ತಂಡದ ಸಂಪೂರ್ಣ ಪಟ್ಟಿ ಇಂತಿದೆ:
ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಯಜುವೇಂದ್ರ ಚಹಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆ್ಯಡಂ ಜಾಂಪಾ, ಜೋಶ್ ಪಿಲಿಪ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ, ಕೈಲ್ ಜೆಮಿಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಡ್ಯಾನಿಯಲ್ ಕ್ರಿಸ್ಟಿಯನ್, ಸಚಿನ್ ಬೇಬಿ, ರಜತ್ ಪಾಟೀದಾರ್, ಮೊಹಮ್ಮದ್ ಅಜರುದ್ದೀನ್, ಸುಯಶ್ ಪ್ರಭುದೇಸಾಯಿ ಮತ್ತು ಕೆಎಸ್ ಭರತ್.

ಹರಾಜಿಗೂ ಮೊದಲೇ ಉಳಿಸಿಕೊಂಡ ಆಟಗಾರರ ಪಟ್ಟಿ: ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಯಜುವೇಂದ್ರ ಚಹಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆ್ಯಡಂ ಜಾಂಪಾ, ಜೋಶ್ ಪಿಲಿಪ್, ಶಹಬಾಜ್ ಅಹ್ಮದ್ ಮತ್ತು ಪವನ್ ದೇಶಪಾಂಡೆ.

ಬಿಡುಗಡೆಗೊಂಡ ಆಟಗಾರರು: ಆ್ಯರೋನ್ ಫಿಂಚ್, ಕ್ರಿಸ್ ಮೊರಿಸ್, ಇಸುರು ಉದಾನ, ಮೊಯಿನ್ ಅಲಿ, ಪವನ್ ನೇಗಿ, ಗುರ್‌ಕೀರಾತ್ ಸಿಂಗ್ ಮನ್, ಶಿವಂ ದುಬೆ, ಡೇನ್ ಸ್ಟೇನ್, ಪಾರ್ಥಿವ್ ಪಟೇಲ್ ಮತ್ತು ಉಮೇಶ್ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT