ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021: ಒಂದೇ ಪಂದ್ಯದಲ್ಲಿ ವಿಶಿಷ್ಟ ಶತಕ ಹಾಗೂ ದ್ವಿಶತಕ ದಾಖಲೆ ಬರೆದ ಚಾಹಲ್

Last Updated 9 ಏಪ್ರಿಲ್ 2021, 14:40 IST
ಅಕ್ಷರ ಗಾತ್ರ

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಒಂದೇ ಪಂದ್ಯದಲ್ಲಿ ಅತಿ ವಿಶಿಷ್ಟ 'ಶತಕ' ಹಾಗೂ 'ದ್ವಿಶತಕ'ದ ದಾಖಲೆಗೆ ಪಾತ್ರವಾಗಿದ್ದಾರೆ.

ಅದೇಗೆ ಸಾಧ್ಯ ಎಂಬ ಕುತೂಹಲ ನಿಮ್ಮಲ್ಲೂ ಕಾಡಬಹುದು. ವಿಷಯ ಏನೆಂದರೆ, ಐಪಿಎಲ್‌ನಲ್ಲಿ 100 ಪಂದ್ಯಗಳ ಮೈಲುಗಲ್ಲನ್ನು ಚಹಾಲ್ ತಲುಪಿದ್ದಾರೆ.

ಹಾಗೆಯೇ ಒಟ್ಟಾರೆಯಾಗಿ 200ನೇ ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ದಾಖಲೆಗೂ ಭಾಜನವಾಗಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ ವಿಶಿಷ್ಟ ಶತಕ ಹಾಗೂ ದ್ವಿಶತಕದ ದಾಖಲೆಯನ್ನು ಬರೆದಿದ್ದಾರೆ.

ಈ ಪೈಕಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಚಾಹಲ್ 99ನೇ ಪಂದ್ಯವನ್ನು ಆಡುತ್ತಿದ್ದಾರೆ. ಐಪಿಎಲ್‌ನಲ್ಲಿ ಚಾಹಲ್ ಮುಂಬೈ ಇಂಡಿಯನ್ಸ್ ಪರ ಪದಾರ್ಪಣೆ ಮಾಡಿದ್ದರು.

ಆರ್‌ಸಿಬಿ ತಂಡವನ್ನು ಸೇರಿದ ಬಳಿಕ ಅತಿ ಹೆಚ್ಚು ಯಶಸ್ಸನ್ನು ಕಂಡಿರುವ ಚಾಹಲ್, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ನೀಲಿ ಜೆರ್ಸಿ ಧರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಭಾರತ ಹಾಗೂ ಆರ್‌‌ಸಿಬಿ ಪಾಲಿಗೆ ಪರಿಣಾಮಕಾರಿ ಬೌಲರ್ ಎಂದೆನಿಸಿದ್ದಾರೆ.

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT