ಶನಿವಾರ, ಮೇ 15, 2021
23 °C

IPL 2021: ಔಟ್ ಆದ ಸಿಟ್ಟಲ್ಲಿ ಕುರ್ಚಿ ಹೊಡೆದುರುಳಿಸಿದ ವಿರಾಟ್; ವ್ಯಾಪಕ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಔಟ್ ಆದ ಸಿಟ್ಟಲ್ಲಿ ಕುರ್ಚಿ ಹೊಡೆದುರುಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ  ವಿರಾಟ್ ಕೊಹ್ಲಿ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. 

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ನಡೆದ ಪಂದ್ಯದಲ್ಲಿ ಘಟನೆ ನಡೆದಿತ್ತು. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಎಂದಿನಂತೆ ಹಾಯಾಗಿ ಬ್ಯಾಟ್ ಬೀಸಲು ಸಾಧ್ಯವಾಗಿರಲಿಲ್ಲ. 29 ಎಸೆತಗಳನ್ನು ಎದುರಿಸಿದರೂ ಕೇವಲ 33 ರನ್‌ಗಳನ್ನಷ್ಟೇ ಗಳಿಸಿದ್ದರು. 

ಜೇಸನ್ ಹೋಲ್ಡರ್ ಎಸೆತದಲ್ಲಿ ವಿಜಯ್ ಶಂಕರ್‌ಗ್ ಕ್ಯಾಚಿತ್ತು ಕೊಹ್ಲಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದರು. ಈ ಸಂದರ್ಭದಲ್ಲಿ ಸಂಯಮವನ್ನು ಕಳೆದುಕೊಂಡ ಕೊಹ್ಲಿ ಮೊದಲು ಬೌಂಡರಿ ಹಗ್ಗವನ್ನು ಇನ್ನು ಮುಂದಕ್ಕೆ ಸಾಗಿ ಡಗೌಟ್‌ನಲ್ಲಿದ್ದ ಕುರ್ಚಿಯನ್ನು ಬ್ಯಾಟ್‌ನಿಂದ ಹೊಡೆದುರುಳಿಸಿದರು. 

ಕುರ್ಚಿ ಖಾಲಿ ಆಗಿದ್ದರಿಂದ ಯಾವುದೇ ಅಪಾಯ ಎದುರಾಗಲಿಲ್ಲ. ಆದರೆ ನಾಯಕ ಕೊಹ್ಲಿ ವರ್ತನೆಯು ವ್ಯಾಪಕ ಟೀಕೆಗೆ ಕಾರಣವಾಗಿದೆ.

ತಮ್ಮ ಕೆರಿಯರ್ ಆರಂಭದಲ್ಲೇ ಕೆಟ್ಟ ವರ್ತನೆಯಿಂದಾಗಿ ಕೆಂಗಣ್ಣಿಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ, ನಾಯಕನಾದ ಬಳಿಕ ತಮ್ಮ ಭಾವನೆಗಳನ್ನು ಹತೋಟಿಯಲ್ಲಿಡುವಲ್ಲಿ ಯಶಸ್ವಿಯಾಗಿದ್ದರು. 

ಆದರೆ ಸುದೀರ್ಘ ಸಮಯದ ಬಳಿಕ ಮತ್ತೆ ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಸಭ್ಯರ ಆಟ ಕ್ರಿಕೆಟ್‌ನಲ್ಲಿ ಕಪ್ತಾನ ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ. ಅಲ್ಲದೆ ಇತರೆ ಕ್ರಿಕೆಟಿಗರಿಗೂ ಮಾದರಿಯಾಗಬೇಕು. ಇಲ್ಲಿ ವಿರಾಟ್ ಕೊಹ್ಲಿ ಮಗದೊಮ್ಮೆ ಎಲ್ಲೇ ಮೀರಿರುವುದು ಕಂಡುಬಂದಿದೆ. 

ನಾಯಕ ವಿರಾಟ್ ಕೊಹ್ಲಿ ವಿರುದ್ಧ ಮ್ಯಾಚ್ ರೆಫರಿ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು