ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | RCB vs PBKS: ಪಂಜಾಬ್ ವಿರುದ್ಧ ರೋಚಕ ಗೆಲುವು; ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ
LIVE

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಈ ಮೂಲಕ ಐಪಿಎಲ್ 2021ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ಗೆ ಪ್ರವೇಶಿಸಿದ ಮೂರನೇ ತಂಡವೆನಿಸಿದೆ.
Last Updated 3 ಅಕ್ಟೋಬರ್ 2021, 14:21 IST
ಅಕ್ಷರ ಗಾತ್ರ
14:1803 Oct 2021

ಗೆಲುವಿನ ರೋಚಕ ಕ್ಷಣ

13:4503 Oct 2021

ಆರ್‌ಸಿಬಿಗೆ 6 ರನ್ ಅಂತರದ ರೋಚಕ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 6 ರನ್ ಅಂತರದ ರೋಚಕ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಿದೆ. 

ಈ ಮೂಲಕ ಅಂತಿಮ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದ ಮೂರನೇ ತಂಡವೆನಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನ ಅರ್ಧಶತಕದ (57) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

ಬಳಿಕ ಗುರಿ ಬೆನ್ನತ್ತಿದ ಪಂಜಾಬ್, ಮಯಂಕ್ ಅಗರವಾಲ್ ಅರ್ಧಶತಕದ (57) ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಸಮರ್ಥವಾಯಿತು. 

ಆರ್‌ಸಿಬಿ ಪರ ಮೂರು ವಿಕೆಟ್ ಕಬಳಿಸಿದ ಯಜುವೇಂದ್ರ ಚಾಹಲ್, ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಇದರೊಂದಿಗೆ ಪಂಜಾಬ್, ಪ್ಲೇ-ಆಫ್ ಪ್ರವೇಶ ಹಾದಿಯು ಮತ್ತಷ್ಟು ಕಠಿಣವೆನಿಸಿದೆ. 

13:4003 Oct 2021

ಚಾಹಲ್ ಕೈಚಳಕ

13:2003 Oct 2021

ಫಿಫ್ಟಿ ಬೆನ್ನಲ್ಲೇ ಮಯಂಕ್ ಔಟ್

13:1503 Oct 2021

ಪೂರನ್ ವಿಕೆಟ್ ಪತನ

13:1203 Oct 2021

ಆರ್‌ಸಿಬಿ ತಿರುಗೇಟು

13:0003 Oct 2021

39 ರನ್ ಗಳಿಸಿ ರಾಹುಲ್ ಔಟ್

12:5903 Oct 2021

ಮಯಂಕ್-ರಾಹುಲ್ ಅರ್ಧಶತಕದ ಜೊತೆಯಾಟ

12:3303 Oct 2021

ರಾಹುಲ್-ಮಯಂಕ್ ಉತ್ತಮ ಜೊತೆಯಾಟ

165 ರನ್ ಗುರಿ ಬೆನ್ನತ್ತಿದ ಪಂಜಾಬ್‌ಗೆ ಆರಂಭಿಕರಾದ ನಾಯಕ ಕೆ.ಎಲ್. ರಾಹುಲ್ ಹಾಗೂ ಮಯಂಕ್ ಅಗರವಾಲ್ ಉತ್ತಮ ಆರಂಭವೊದಗಿಸಿದರು. ಪವರ್ ಪ್ಲೇ ಅಂತ್ಯಕ್ಕೆ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿತ್ತು.