ಮಂಗಳವಾರ, ಏಪ್ರಿಲ್ 20, 2021
32 °C

IPL 2021: ಈ ಬಾರಿಯ ಐಪಿಎಲ್‌ ವಿಶೇಷತೆಗಳ ಮಾಹಿತಿ ಇಲ್ಲಿದೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡಳಿತ ಮಂಡಳಿಯು, ಭಾನುವಾರದಂದು ಮುಂಬರುವ ಐಪಿಎಲ್ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಿರುವುದರಿಂದ ಈ ಬಾರಿಯ ಐಪಿಎಲ್ ಹಲವಾರು ವೈಶಿಷ್ಟ್ಯಗಳಿಗೆ ಕಾರಣವಾಗಿದೆ. ಈ ಸಂಬಂಧ ಸಂಪೂರ್ಣ ಮಾಹಿತಿ ಕೊಡಲಾಗಿದೆ.

ಆರು ನಗರಗಳಲ್ಲಿ ಟೂರ್ನಿ ಆಯೋಜನೆ:
ಹಿಂದಿನ ಆವೃತ್ತಿಗಿಂತಲೂ ವಿಭಿನ್ನವಾಗಿ ಈ ಬಾರಿಯ ಐಪಿಎಲ್ ಟೂರ್ನಿಗೆ ಒಟ್ಟು ಆರು ನಗರಗಳು ಆತಿಥ್ಯ ವಹಿಸಲಿದೆ.

ಆತಿಥ್ಯ ವಹಿಸುತ್ತಿರುವ ನಗರಗಳು: ಅಹಮದಾಬಾದ್, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಮತ್ತು ಕೋಲ್ಕತ್ತ.

ಪ್ಲೇ ಆಫ್, ಫೈನಲ್ ಎಲ್ಲಿ?
ಪ್ಲೇ ಆಫ್ ಹಾಗೂ ಫೈನಲ್ ಪಂದ್ಯಗಳಿಗೆ ಗುಜರಾತ್‌ನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯಗಳು ಈ ಸ್ಟೇಡಿಯಂನಲ್ಲಿ ಆಯೋಜನೆಯಾಗಲಿದೆ. ಫೈನಲ್ ಪಂದ್ಯವು ಮೇ 30ರಂದು ನಡೆಯಲಿದೆ.

ಇದನ್ನೂ ಓದಿ: 

ಉದ್ಘಾಟನಾ ಪಂದ್ಯ ಎಲ್ಲಿ ?
ಏ. 9ರಂದು ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸವಾಲನ್ನು ಎದುರಿಸಲಿದೆ.

ತಟಸ್ಥ ತಾಣಗಳಲ್ಲಿ ಪಂದ್ಯ ಆಯೋಜನೆ:
ಎಲ್ಲ ಎಂಟು ತಂಡಗಳು 'ಹೋಮ್' ಹಾಗೂ 'ಅವೇ' ಪಂದ್ಯಗಳನ್ನು ತಟಸ್ಥ ತಾಣಗಳಲ್ಲಿ ಆಡಲಿವೆ. ಈ ಮೂಲಕ ಸಮತೋಲನ ಕಾಪಾಡಿಕೊಳ್ಳಲಾಗಿದ್ದು, ಎಲ್ಲ ಎಂಟು ತಂಡಗಳಿಗೂ ಸಮಾನ ಅವಕಾಶವಿರಲಿದೆ.

ಲೀಗ್ ಹಂತದಲ್ಲಿ ಎಲ್ಲ ಎಂಟು ತಂಡಗಳು ನಾಲ್ಕು ತಾಣಗಳಲ್ಲಿ ಪಂದ್ಯಗಳನ್ನು ಆಡಲಿವೆ. ಒಟ್ಟು 56 ಲೀಗ್ ಪಂದ್ಯಗಳ ಪೈಕಿ ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತ ತಲಾ 10 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಹಾಗೆಯೇ ಅಹಮದಾಬಾದ್ ಹಾಗೂ ದೆಹಲಿಯಲ್ಲಿ ತಲಾ ಎಂಟು ಪಂದ್ಯಗಳು ನಡೆಯಲಿದೆ.

11 ಡಬಲ್ ಹೆಡರ್:
ಒಟ್ಟು 11 ಡಬಲ್ ಹೆಡರ್‌ಗಳು (ದಿನವೊಂದರಲ್ಲಿ ಎರಡು ಪಂದ್ಯ) ನಿಗದಿಯಾಗಿವೆ. ಆರು ತಂಡಗಳು ತಲಾ ಮೂರು ಮತ್ತು ಎರಡು ತಂಡಗಳು ತಲಾ ಎರಡು ಸಂಜೆಯ ಪಂದ್ಯಗಳನ್ನು ಆಡಲಿವೆ.

ಇದನ್ನೂ ಓದಿ: 

ಪಂದ್ಯ ಸಮಯ ?
ಭಾರತೀಯ ಕಾಲಮಾನ ಸಂಜೆಯ ಪಂದ್ಯಗಳು 3.30ಕ್ಕೆ ಮತ್ತು ರಾತ್ರಿ ವೇಳೆಯ ಪಂದ್ಯಗಳು 7.30ಕ್ಕೆ ಸರಿಯಾಗಿ ನಡೆಯಲಿವೆ.

ಐಪಿಎಲ್ ವೇಳಾಪಟ್ಟಿಯನ್ನು ಬಹಳ ಅಚ್ಚುಕಟ್ಟಾಗಿ ರಚಿಸಲಾಗಿದ್ದು, ಎಲ್ಲ ಎಂಟು ತಂಡಗಳು ಲೀಗ್ ಹಂತದಲ್ಲಿ ಮೂರು ಬಾರಿ ಮಾತ್ರ ಒಂದು ತಾಣದಿಂದ ಮಗದೊಂದು ತಾಣಕ್ಕೆ ಪ್ರಯಾಣಿಸಲಿದೆ. ಈ ಮೂಲಕ ಕೋವಿಡ್ ಅಪಾಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲಾಗಿದೆ.

ಮುಚ್ಚಿದ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆ
ಸದ್ಯ ಮುಚ್ಚಿದ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜಿಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ. ಅಲ್ಲದೆ ಪ್ರೇಕ್ಷಕರಿಗೆ ಪ್ರವೇಶ ಅನುಮತಿ ನೀಡುವ ಕುರಿತು ಟೂರ್ನಿಯ ಮುಂದಿನ ಹಂತದಲ್ಲಿ ನಿರ್ಧರಿಸಲಾಗುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು