ಗುರುವಾರ , ಅಕ್ಟೋಬರ್ 28, 2021
18 °C

IPL 2021: ನಟರಾಜನ್‌‌ಗೆ ಕೋವಿಡ್; ಬದಲಿ ಆಟಗಾರನನ್ನು ಘೋಷಿಸಿದ ಹೈದರಾಬಾದ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ದುಬೈ: ಎಡಗೈ ವೇಗದ ಬೌಲರ್ ತಂಗರಸು ನಟರಾಜನ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅಲ್ಪಾವಧಿಗೆ ಬದಲಿ ಆಟಗಾರನನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ಘೋಷಿಸಿದೆ.

ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಎರಡನೇ ಹಂತದಲ್ಲಿ ಸೆಪ್ಟೆಂಬರ್ 22ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಟರಾಜನ್ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಗೊಂಡಿತ್ತು.

ಇದನ್ನೂ ಓದಿ: 

ಈಗ ನಟರಾಜನ್ ಗುಣಮುಖರಾಗಿ ತಂಡವನ್ನು ಮರು ಸೇರ್ಪಡೆಯಾಗುವ ವರೆಗೆ ಜಮ್ಮು ಕಾಶ್ಮೀರದ ಮಧ್ಯಮ ಗತಿಯ ವೇಗದ ಬೌಲರ್ ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

 

 

 

ನಟರಾಜನ್ ಸಂಪೂರ್ಣವಾಗಿ ಗುಣಮುಖರಾದ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಐಪಿಎಲ್ ಆಯೋಜಕರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

 

ಜಮ್ಮು ಕಾಶ್ಮೀರ ಪರ ಟಿ20 ಹಾಗೂ ಲಿಸ್ಟ್ 'ಎ' ಕ್ರಿಕೆಟ್ ಆಡಿರುವ ಉಮ್ರಾನ್ ಮಲಿಕ್ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಈಗಾಗಲೇ ನೆಟ್ ಬೌಲರ್ ಆಗಿ ಸನ್‌ರೈಸರ್ಸ್ ಕ್ಯಾಂಪ್‌ನಲ್ಲಿ ಗುರುತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು