ಔಟಾಗಿ ತೆರಳುವಾಗ ಆಗಸದತ್ತ ಮುಖ ಮಾಡಿ ಮಾತನಾಡಿಕೊಂಡ ವಿರಾಟ್: ವಿಡಿಯೊ ವೈರಲ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ತಂಡ ಸೋಲು ಕಂಡಿದೆ. ಇದರೊಂದಿಗೆ ಫಫ್ ಡುಪ್ಲೆಸಿ ಬಳಗದ ಪ್ಲೇಆಫ್ ಹಾದಿ ಕಠಿಣವಾಗಿದೆ.
ಈ ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್, ಮಾಜಿ ನಾಯಕ ವಿರಾಟ್ ಕೊಹ್ಲಿ 20 (14) ರನ್ ಗಳಿಸಿ ಔಟಾದರು. ಕ್ಯಾಚಿತ್ತು ಪೆವಿಲಿಯನ್ನತ್ತ ನಿರಾಶೆಯಿಂದ ನಡೆದು ಹೋಗುತ್ತಿದ್ದ ವಿರಾಟ್, ಆಕಾಶದತ್ತ ಮುಖ ಮಾಡಿ, ಏನನ್ನೋ ಮಾತಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಓದಿ... ನಿಮ್ಮನ್ನು ನೀವು ಎಷ್ಟು ಪ್ರೀತಿಸುತ್ತೀರೋ ಅಷ್ಟು ಸುಂದರವಾಗುತ್ತೀರಿ: ರಾಧಿಕಾ ಪಂಡಿತ್
ವಿರಾಟ್ ಮೇಲೆ ನೋಡುತ್ತಾ ಯಾರಿಗೆ, ಏನು ಹೇಳಿರಬಹುದು? ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.
20 ರನ್ ಗಳಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿ ಕಗಿಸೊ ರಬಾಡ ಅವರ ಬೌಲಿಂಗ್ನಲ್ಲಿ ಕ್ಯಾಚ್ಗೆ ಔಟಾದರು. ಚೆಂಡು ಕೊಹ್ಲಿ ಗ್ಲೌಸ್ಗೆ ತಾಗಿ ಶಾರ್ಟ್ ಫೈನ್ ಲೆಗ್ನಲ್ಲಿದ್ದ ರಾಹುಲ್ ಚಾಹಾರ್ ಅವರ ಕೈಸೇರಿತ್ತು.
ಕೊಹ್ಲಿ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪಂಜಾಬ್ ಕಿಂಗ್ಸ್ ತಂಡ ‘ಅದೃಷ್ಟವು ಶೀಘ್ರದಲ್ಲೇ ನಿಮ್ಮ ಕಡೆಗೂ ತಿರುಗುತ್ತದೆ’ ಎಂದು ಹೇಳಿದೆ.
‘ಕೊಹ್ಲಿ ಅಕ್ಷರಶಃ ಅದೃಷ್ಟಕ್ಕಾಗಿ ಮೊರೆ ಇಡುತ್ತಿದ್ದಾರೆ’ ಎಂದು ಟ್ವೀಟರ್ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
Have never seen him like this 💔 @imVkohli pic.twitter.com/edmH6T1feo
— Sweta Sharma (@SwetaSharma22) May 13, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.