ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಮತ್ತೆ ಸೊನ್ನೆ ಸುತ್ತಿದ ಕೊಹ್ಲಿ; ಭಾರಿ ಟ್ರೋಲ್‌ಗೆ ಗುರಿ

ಅಕ್ಷರ ಗಾತ್ರ

ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟರ್ ವಿರಾಟ್ ಕೊಹ್ಲಿ, ಮೂರನೇ ಸಲ 'ಗೋಲ್ಡನ್ ಡಕ್' ಔಟ್ ಆಗಿದ್ದಾರೆ.

ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ಸಂಬಂಧ ಮೀಮ್ಸ್‌ ಹರಿದಾಡುತ್ತಿವೆ.

ಕೆಜಿಎಫ್‌ 2 ಚಿತ್ರದಲ್ಲಿ ರಾಕಿ ಭಾಯ್ ಅವರ ಜನಪ್ರಿಯ 'ವೈಲೆನ್ಸ್' ಡೈಲಾಗ್‌ನಲ್ಲಿ ಕೊಹ್ಲಿ ಅವರನ್ನು ಟ್ರೋಲ್ ಮಾಡಲಾಗಿದೆ. 'ಝೀರೋ...ಝೀರೋ...ಝೀರೋ...ಐ ಡೊಂಟ್ ಲೈಕ್ ಇಟ್...ಐ ಅವಾಯ್ಡ್....ಬಟ್...ಝೀರೋ ಲೈಕ್ಸ್ ಮಿ...ಐ ಕಾಂಟ್ ಅವಾಯ್ಡ್' ಎಂದು ವ್ಯಂಗ್ಯ ಮಾಡಲಾಗಿದೆ.

ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ವಿರಾಟ್, ಮೊದಲ ಎಸೆತದಲ್ಲೇ ಶೂನ್ಯಕ್ಕೆಔಟ್ ಆದರು. ಈ ಮೂಲಕ ಹೈದರಾಬಾದ್ ವಿರುದ್ಧವೇ ಎರಡನೇ ಸಲ ಗೋಲ್ಡನ್ ಡಕ್ ಔಟ್ ಆಗಿದ್ದಾರೆ.

ಲಖನೌ ಸೂಪರ್ ಜೈಂಟ್ಸ್ ವಿರುದ್ಧವೂ ಮೊದಲ ಎಸೆತದಲ್ಲಿ ಔಟ್ ಆಗಿದ್ದರು.

ಒಟ್ಟಾರೆಯಾಗಿ ಐಪಿಎಲ್‌ನಲ್ಲಿ 9ನೇ ಬಾರಿಗೆ ಶೂನ್ಯಕ್ಕೆ ಔಟ್ ಆಗಿದ್ದಾರೆ. ಇದರಲ್ಲಿ ಆರು ಗೋಲ್ಡನ್ ಡಕ್ ಸೇರಿವೆ. ಈ ಪೈಕಿ ಪ್ರಸಕ್ತ ಸಾಲಿನಲ್ಲಿ ಮೂರನೇ ಸಲ ಗೋಲ್ಡನ್ ಡಕ್ ಔಟ್ ಆಗಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಸತತ ವೈಫಲ್ಯ ಅನುಭವಿಸಿರುವ ಕೊಹ್ಲಿ 12 ಪಂದ್ಯಗಳಲ್ಲಿ 19.6ರ ಸರಾಸರಿಯಲ್ಲಿ 216 ರನ್ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT